ಸಮಾಜದಲ್ಲಿ ಸಂವಹನೆ ಸಾಮಾಜಿಕ ಸೇವೆಗಾಗಿ ಸಂಘಟನೆ ಆರಂಭ
ರಾಣೇಬೆನ್ನೂರು 21: ಸಮಾಜದಲ್ಲಿ ನಿತ್ಯವೂ ಜೀವನ ಸಾಗಿಸುವ ನಾವುಗಳು ಸಮಾಜಕ್ಕಾಗಿ ಸಮುದಾಯದ ಜೊತೆಗೆ ಬೆರೆತು ಏನಾದರೂ ಕೆಲಸ ಮಾಡಬೇಕು ಎನ್ನುವ ಏಕೈಕ ಉದ್ದೇಶದಿಂದ ತಮ್ಮ ವೃತ್ತಿಯ ಜೊತೆಗೆ, ಸಮುದಾಯದ ಸಂವಹನೆಗಾಗಿ ಕೃಷಿ ಪದವೀಧರರ ಸಂಘವು ಪುನ: ಆಸ್ತಿತ್ವಕ್ಕೆ ಬಂದಿದೆ ಎಂದು ನೂತನ ಅಧ್ಯಕ್ಷ ಎಚ್ ಎನ್ ದೇವಕುಮಾರ ಹೇಳಿದರು.
ಅವರು ಶುಕ್ರವಾರ ನೇಕಾರ ಕಾಲೋನಿಯ ಸಂಘದ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ವಾಣಿಜ್ಯ ನಗರ ರಾಣೇಬೆನ್ನೂರು ವ್ಯವಹಾರಿಕವಾಗಿ, ಮತ್ತು ಕೃಷಿ ಉತ್ಪಾದನೆಯಲ್ಲಿ, ಪ್ರಥಮ ಸ್ಥಾನದಲ್ಲಿದೆ, ವಿಶ್ವದ ಭೂಪಟದಲ್ಲಿ ಬೀಜೋತ್ಪಾದನೆ ಮೂಲಕ ತನ್ನನೇ ತಾನು ಗುರುತಿಸಿಕೊಂಡಿದೆ. ನಾಡು, ದೇಶ, ವಿದೇಶಗಳ ಬೀಜೋತ್ಪಾದನಾ ಕಂಪನಿಗಳು ಇಲ್ಲಿವೆ ಎಂದರು. ಕಳೆದ 15 ವರ್ಷಗಳ ಹಿಂದೆ ಕೃಷಿ ಪದವೀಧರರ ಸಂಘವು ನಗರದಲ್ಲಿ ಪ್ರಾರಂಭವಾಗಿತ್ತು, ಅದರ ಮೂಲಕ ಕಲೆ ಸಾಹಿತ್ಯ ಸಂಗೀತ ನಾಟಕ, ರೈತ ಜಾಗೃತಿ, ಅನೇಕ ಕೃಷಿ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುದರ ಮೂಲಕ ಸಂಘವು ಜನ ಮಾನಸದಲ್ಲಿ ತನ್ನನೇ ತಾನು ಗುರುತಿಸಿಕೊಂಡು ಕಾರ್ಯನಿರ್ವಹಿಸಿದ ಇತಿಹಾಸ ಸಂಘಕ್ಕಿದೆ ಎಂದು ಸಂಘದ ಪುನರಾವಲೋಕವನ್ನು ಮಾಡಿದ ದೇವಕುಮಾರ್ ಅವರು, ಅದನ್ನು ಪುನರ್ ಪ್ರತಿಷ್ಠಾಪಿಸಲಾಗಿದ್ದು, ಎಂದಿನಂತೆ ತನ್ನ ಕಾರ್ಯ ನಿರ್ವಹಿಸಲಿದೆ ವಿಶೇಷವಾಗಿ ರೈತರಿಗಾಗಿ ಕೃಷಿ ಜಾಗೃತಿ, ಮಾಹಿತಿ, ಮಾರ್ಗದರ್ಶನ ಮಾಡುವುದರ ಮೂಲಕ ರೈತರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು. ಜನವರಿ 23,2023 ರಂದು ಸೋಮವಾರ ಇದರ ಉದ್ಘಾಟನಾ ಸಮಾರಂಭವು ಜರುಗಲಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅರುಣ ಕುಮಾರ ಪೂಜಾರ, ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ, ಎಸ್. ವಿ. ಸುರೇಶ್, ಪಿ. ಎಲ್. ಪಾಟೀಲ, ಎಂ. ಹನುಮಂತಪ್ಪ, ಆರ್. ಸಿ.ಜಗದೀಶ್, ಕೆ.ಎಂ.ಇಂದ್ರೇಶ್ ಮತ್ತಿತರರು ಪಾಲ್ಗೊಳ್ಳುವರು ಎಂದರು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್ ಎನ್ ದೇವಕುಮಾರ್ ಅವರು ವಹಿಸುವರು. ಇದೇ ಸಂದರ್ಭದಲ್ಲಿ ದಾವಣಗೆರೆ, ರಾಣೇಬೆನ್ನೂರು ಸೇರಿದಂತೆ ಇತರೆ ಭಾಗಗಳ ಕೃಷಿ ಬೀಜೋತ್ಪಾದನಾ ಕಂಪನಿಗಳ ಮಾಲೀಕರ, ವ್ಯವಸ್ಥಾಪಕರ ಅಭಿನಂದನಾ ಸನ್ಮಾನ ನಡೆಯಲಿದೆ ಎಂದು ದೇವಕುಮಾರ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಬಿರಾದಾರ್, ಖಜಾಂಚಿ ಜಿ.ಎಸ್ ರಾಮಚಂದ್ರ, ಕಾರ್ಯದಶರ್ಿ ಕುಮಾರಸ್ವಾಮಿ ದೇವರಮನಿ, ಜಯಪ್ರಕಾಶ್ ಟಿ. ಆರ್. ವೆಂಕಟೇಶ ನಿಟ್ಟೂರ ರಾಜು ಆರ್ಜಿ. ಜೆ. ಜಿ.ಮುದ್ದೇಗೌಡ, ಪ್ರಕಾಶ್ ಮದಿಗೌಡ್ರು, ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರ