ಸಿಂಧಗಿ

ಲಿಂ.ಪೂಜ್ಯರ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ

ಲಿಂ.ಪೂಜ್ಯರ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ

ಸಿಂದಗಿ: ನಗರದ ವಿರಕ್ತಮಠದಲ್ಲಿ ಲಿಂ.ಸಿದ್ದಲಿಂಗ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೆ ಮತ್ತ ಲಿಂ.ಪೂಜ್ಯರ ಗದ್ದುಗೆ ಲೋಕಾರೆ​‍್ಣ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಸಾರಂಗ ಮಠದ ಡಾ.ಪ್ರಭುಸಾರಂಗದೇವ ಶೀವ ಆಚಾರ್ಯರು ಮಾತಾನಾಡಿ, ತಾಲೂಕಿನ ಉದ್ದಗಲಕ್ಕೂ ಪ್ರಸಿದ್ದರಾಗಿ, ಸಾರ್ಥಕ ಬದುಕು ನಡೆಸಿ, ಭವರೋಗ ನೀವಾರಿಸುವಲ್ಲಿ ಹೆಸರಾಗಿದ್ದ ಮ.ನಿ. ಪ್ರ ಸಿದ್ದಲಿಂಗ ಸ್ವಾಮೀಜಿಗಳು ಲಿಂಗಕೈರಾಗಿ ಒಂದು ವರ್ಷ ಪೂರೈಸುತ್ತಿದ್ದು, ಶ್ರೀಗಳ ಅನನ್ಯ ಸೇವೆ ನೆನೆದು ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಗಣ್ಯ ವ್ಯಾಪರಸ್ಥರಾದ ಅಶೋಕ ವಾರದ, ಶ್ರೀಶೈಲ ನಂದಿಕೋಲ, ಮಲ್ಲಿಕಾರ್ಜುನ ಅಲ್ಲಾಪುರ, ಮಹಿಬೂಬ ಮುಲ್ಲಾ , ಆರಿಫ ಅಂತರಗಂಗಿ, ಭೋಜರಾಜ ದೇಸಾಯಿ, ಅಂಬಲಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ತಾಲೂಕಿನ ಭಕ್ತ ಸಮೂಹ ಉಪಸ್ಥಿತರಿದ್ದರು.  

ವಿರಕ್ತಮಠದಲ್ಲಿ ಶ್ರೀಗಳು ಇಂದಿಗೂ ಇದ್ದಾರೆ ಎನ್ನುವ ಭಾವನೆ ನಮ್ಮೆಲ್ಲರಲ್ಲಿದೆ. ಶೂನ್ಯಭಾವನೆ, ಅನಾಥ ಪ್ರಜ್ಞೆ ಯಾರಿಗೂ ಕಾಡುತ್ತಿಲ್ಲ. ಶ್ರೀಗಳ ಅನುಗ್ರಹ ಅವರ ತಪಸ್ಸಿನ ಶಕ್ತಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ. ಅವರ ಆಶೀರ್ವಾದ ಎಲ್ಲಾ ಭಕ್ತರಿಗೆ ಲಭಿಸುತ್ತದೆ. ತೆರೆದ ಪುಸ್ತಕದಂತೆ ಜೀವನ ನಡೆಸಿರುವ ಅವರ ಜೀವನವೇ ನಮಗೆ ಸಂದೇಶ. 

ಗುರುರಾಜ ಮಠ 


ಸುದ್ದಿ ಓದಿ