ಕಸಾಪ ಭವನದಲ್ಲಿ ಗಾಂಧಿ ಜಯಂತಿ ಸ್ಮರಣೆ /.././...
ರಾಣೇಬೆನ್ನೂರ 15: ಇಲ್ಲಿನ ವಾಗೀಶ ನಗರದ, ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಸ್ಮರಣೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಣಕಲ್ಲಬಿದರಿ ಗ್ರಾಮದ ಶ್ರೀ ಜಗಜೀವನರಾಮ್ ಸ್ವ ಸಹಾಯ ಮಹಿಳಾ ಸಂಸ್ಥೆ, ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮವು, ಜಯಂತಿ ಸವಿನೆನಪಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೌಡೇಶ್ವರಿ ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ತತ್ವವನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿಯವರ, ಬದುಕು-ಬರಹ ಅವರ ಸಾಧನೆ ಇಂದಿನ ಯುವಜನಾಂಗಕ್ಕೆ ಸ್ಪೂರ್ತಿಯಾಗಿದೆ, ದೇಶ ಸಾಕಷ್ಟು ಅಭಿವೃದ್ಧಿ ಕಂಡಿದ್ದರೊ ಸಹ, ಮತ್ತಷ್ಟು ಅಭಿವೃದ್ಧಿಗಾಗಿ ಭವಿಷ್ಯದ ನಾಯಕರು ಶ್ರಮಿಸಬೇಕಾದ ಇಂದಿನ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಸಾಪ ಸದಸ್ಯ ಚಂದ್ರಶೇಖರ ಮಡಿವಾಳರ ಅವರು, ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿ ಹರಿಕಾರರು, ಕಲಾವಿದರು ಉಳಿದು, ಬೆಳೆದರೆ ದೇಶೀಯ ಜನಪದ ಹಾಗೂ ಸುಗಮ ಸಂಗೀತ ಕಲೆ ಉಳಿಯಲು ಸಾಧ್ಯ, ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ನಿಜ ಪರಂಪರೆಯ ಸಂಸ್ಕಾರ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ.ಇಂತಹ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಮ್ಮ ಪ್ರಾಯೋಜಕತ್ವವನ್ನು ನೀಡಿ, ಕಲಾವಿದರನ್ನು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಲು ಸಹಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಸಭಾಕಾರ್ಯಕ್ರಮ ನಂತರ ನಡೆದ ಸರಸ್ವತಿ ಕಲಾತಂಡದ ಶ್ರೀಧರ್ ಚಲವಾದಿ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮವೂ ಗಾಂಧಿ ಜಯಂತೋತ್ಸವಕ್ಕೆ ವಿಶೇಷ ಮೆರುಗು ನೀಡಿತ್ತು. ಬಾಬು ಜಗಜೀವನರಾಮ್ ಸ್ವ ಸಹಾಯ ಸಂಘದ ಅಧ್ಯಕ್ಷ ಮಹಾದೇವಕ್ಕ ಹೆಡ್ಡನವರ, ತಾಂಡಾ ರಕ್ಷಣಾ ವೇದಿಕೆಯ ಅಧ್ಯಕ್ಷ ಬೀರ್ಪ ಲಮಾಣಿ, ಮೆಡ್ಲೇರಿ ಕಸಾಪ ಘಟಕದ ಅಧ್ಯಕ್ಷ ಮಾರುತಿ ತಳವಾರ, ಕಲಾವಿದರಾದ ರಮೇಶ ಕುಸಗೂರು, ಬಸವರಾಜ ಸಾವಕ್ಕನವರ,ಮುತ್ತುರಾಜ ಬಿ.ಎಸ್,ಮಹೇಶ ಕೊಣನವರ, ಸೇರಿದಂತೆ ಮತ್ತಿತರ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.