ಬೈಲಹೊಂಗಲ

ಲಿಂ. ಗಂಗಾಧರ ಶ್ರೀಗಳ ಅಧ್ಯಾತ್ಮಿಕ, ಶೈಕ್ಷಣಿಕ ಕ್ರಾಂತಿ ಅಮೋಘ

ಲಿಂ. ಗಂಗಾಧರ ಶ್ರೀಗಳ ಅಧ್ಯಾತ್ಮಿಕ, ಶೈಕ್ಷಣಿಕ ಕ್ರಾಂತಿ ಅಮೋಘ

ಡಾ. ಚಂದ್ರಶೇಖರ ಸಾಧುನವರ ಹೇಳಿಕೆ: ಶಾಖಾ ಮೂರುಸಾವಿರಮಠದಲ್ಲಿ ಲಿಂ. ಗಂಗಾಧರ ಶ್ರೀಗಳ ಪುಣ್ಯಸ್ಮರಣೆ  

ಬೈಲಹೊಂಗಲ 29: ಶ್ರೀಮಠದ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಲಿಂ.ಗಂಗಾಧರ ಶ್ರೀಗಳು ಹುಟ್ಟುಹಾಕಿದ ಸಂಸ್ಥೆಗಳನ್ನು ಕಾಪಾಡಿ, ಅವುಗಳನ್ನು  ಉತ್ತುಂಗದತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಚಂದ್ರಶೇಖರ ಸಾಧುನವರ ಹೇಳಿದರು.  

ಅವರು ಶನಿವಾರ ಶ್ರೀಮಠದಲ್ಲಿ ಲಿಂಗೈಕ್ಯ ಗಂಗಾಧರ ಸ್ವಾಮೀಜಿಯವರ 13ನೇ ಪುಣ್ಯಸ್ಮರಣೆ ನಿಮಿತ್ಯ  ಕತೃ ಗದ್ದುಗೆ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,  ಲಿಂ. ಗಂಗಾಧರ ಶ್ರೀಗಳು ಈ ಭಾಗದಲ್ಲಿ ಸಾಮಾಜಿಕ, ಅಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿರುವ ಕಾರ್ಯ ಅಮೋಘವಾಗಿದ್ದು ಅವರ ಜೀವಿತ ಅವಧಿಯಲ್ಲಿ ಅಲ್ಪ ಸಮಯದಲ್ಲಿ ಸುಮಾರು ಹಲವಾರು ಸಂಸ್ಥೆಗಳನ್ನು ತೆರೆಯುವ ಮೂಲಕ ಬೈಲಹೊಂಗಲನ್ನು ವಿದ್ಯಾಕಾಶಿಯಾಗಿ ಮಾರ​‍್ಾಡು ಮಾಡುವ ನಿಟ್ಟಿನಲ್ಲಿ ಸದಾ ಕ್ರೀಯಾಶೀಲರಾಗಿದ್ದರು. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು. 

ಶಾಖಾ ಮುರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ  ಮಾತನಾಡಿ, ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮತ್ತು ವಿದ್ಯಾವಂತ ನಿರುದ್ಯೋಗ ಯುವಕರಿಗೆ ನೌಕರಿ ನೀಡುವ ಮೂಲಕ ಅವರ ಬಾಳಿಗೆ ಕಾಮಧೇನು ಕಲ್ಪವೃಕ್ಷವಾಗಿ ಹೊರಹೊಮ್ಮಿದ್ದರು. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿ ರಾಜ್ಯ ಮತ್ತು ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಬೈಲಹೊಂಗಲ ಗಂಡು ಮೆಟ್ಟಿನ ನಾಡಿನ ಇತಿಹಾಸವನ್ನು ಪರಿಚಯಿಸಿ ದೇಶದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕಾರ್ಯ  ಅನನ್ಯವಾಗಿದೆ ಎಂದರು. ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಶ್ರೀಮಠವನ್ನು ಉತ್ತುಂಗಕ್ಕೆ ಒಯ್ಯಲು ಶ್ರಮಿಸುವುದಾಗಿ ಭರವಸೆ ನೀಡಿದರು. 

ಸಂಸ್ಥೆಯ ನಿರ್ದೇಶಕ ಎಸ್‌.ಸಿ.ಮೆಟಗುಡ್ಡ, ವಿರುಪಾಕ್ಷ ಕೊರಿಮಠ, ಎಸ್‌.ಎಸ್‌.ಸಿದ್ನಾಳ. ಸಂಯೋಜಕ ಎಸ್‌.ಎಂ.ಸಿದ್ದನಾಯ್ಕ. ಎಸ್‌.ವಿ.ಪರಂಡಿ,  ಬಸವಪ್ರಭು ಬೆಳಗಾವಿ, ಕಾಶೀನಾಥ ಬಿರಾದಾರ, ಕುಮಾರಗೌಡ ಪಾಟೀಲ, ಸುನೀಲ ದೇಶನೂರ, ಮಹಾಂತೇಶ  ಅಕ್ಕಿ,  ಆರ್‌.ಎನ್‌.ಕೊಳ್ಳಿ, ಬಿ.ಎಲ್‌.ಸೂರನ್ನವರ, ಹಳೇಗೌಡರ, ಬಿ.ಜೆ. ಹಣಬರಟ್ಟಿ,  ಪಿ.ಎಸ್‌.ತಿರಕನ್ನವರ, ಎ.ಆರ್‌.ಸಿದ್ರಾಮನಿ, ವ್ಹಿ.ಆರ್‌.ಜಕಾತಿ, ಮತ್ತಿತರರು ಇದ್ದರು. 


ಸುದ್ದಿ ಓದಿ