ರಾಣೆಬೆನ್ನೂರ

ಕಾಲೇಜಿನ ‘ಕರಪತ್ರ’ ಬಿಡುಗಡೆ ಕಾರ್ಯಕ್ರಮ

ಕಾಲೇಜಿನ ‘ಕರಪತ್ರ’ ಬಿಡುಗಡೆ ಕಾರ್ಯಕ್ರಮ
ಮೃತ್ಯುಂಜಯ ನಗರದಲ್ಲಿನ ಎಂ.ಕೆ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಎಂ.ಕೆ. ಪಿ.ಯು. ಕಾಲೇಜಿನ ‘ಕರಪತ್ರ’ ಬಿಡುಗಡೆ ಕಾರ್ಯ

ರಾಣೇಬೆನ್ನೂರು 24: ಪ್ರತಿಷ್ಠಿತ ನಗರಗಳಾದ ಬೆಂಗಳೂರ, ಮಂಗಳೂರ, ಧಾರವಾಡ ಹಾಗೂ ಇತರೆ ನಗರಗಳಲ್ಲಿ ಇರುವಂತಹ ಶಿಕ್ಷಣ ನಮ್ಮಲ್ಲಿಯೂ ಸಿಗುವಂತಾದರೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ. ಅಂತಹ ಶಿಕ್ಷಣ ಕೊಡುವ ಸಂಸ್ಥೆ ನಮ್ಮ ರಾಣೇಬೆನ್ನೂರು ನಗರದಲ್ಲಿ ಪ್ರಾರಂಭಗೊಂಡಿದ್ದು ಸಂತಸ ತಂದಿದೆ ಎಂದು ನಗರಸಭೆ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಹೇಳಿದರು. 

ನಗರದ ಪಿ.ಬಿ.ರಸ್ತೆ ಬಳಿ ಇರುವ ಮೃತ್ಯುಂಜಯ ನಗರದಲ್ಲಿನ ಎಂ.ಕೆ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಎಂ.ಕೆ. ಪಿ.ಯು. ಕಾಲೇಜಿನ ‘ಕರಪತ್ರ’ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳೇ ಈ ನಾಡು ಮತ್ತು ದೇಶದ ಶಕ್ತಿ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಸಂಸ್ಕಾರವಂತರಾಗಬೇಕು ಎಂದರು. 

ಎಂ.ಕೆ.ಪಿ.ಯು. ಕಾಲೇಜಿನ ಚೀಪ್ ಟ್ರಸ್ಟ್‌ ಡಾ. ಆರ್‌.ಎಸ್‌. ಯಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಸಿರಿ ಅಕ್ಯಾಡೆಮಿ ಮುಖ್ಯಸ್ಥ ಸಾಂಬಶಿವರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎ.ಬಿ.ರತ್ನಮ್ಮ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಸುಮಂಗಲಾ ಪಾಟೀಲ, ಸಂಜೀವಿನಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಪ್ರಭುಲಿಂಗ ಕೋಡದ, ಎಂ.ಕೆ. ಪಿ.ಯು ಕಾಲೇಜಿನ ವೈಸ್ ಟ್ರಸ್ಟಿ ಮೃತ್ಯುಂಜಯ ಯಲಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. 

ಪ್ರಾಚಾರ್ಯ ಪ್ರಕಾಶ್ ಕೊಡ್ಲಿವಾಡ, ಉಪನ್ಯಾಸಕಿ ಕಲ್ಪನಾ, ಉಷಾ ಮಾಳಗಿ ಹಾಗೂ ರುದ್ರಯ್ಯ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ