ಕಾನಿಪ ಸಂಘದ ಕಾಡ್9 ದುರ್ಬಳಕೆ ಸಹಿಸುವುದಿಲ್ಲ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಗಮೇಶ ಚೂರಿ ಎಚ್ಚರಿಕೆ
ಲೋಕದರ್ಶನ ವರದಿ
ಸಿಂದಗಿ, 31: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಕಾಡ್9 ದುರುಪಯೋಗಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯರು ಕೂಡಾ ಮಾಡಬಾರದು ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಕಳಕಳಿಯ ಮನವಿ ಮಾಡಿದರು.
ಅವರು ಶನಿವಾರ ನಗರದ ಆಲಮೇಲ ರಸ್ತೆಯ ಪಿಇಎಸ್ ಕಾಲೇಜಿನಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸದಸ್ಯರಿಗೆ ಗುರುತಿನ ಕಾಡ್9 ವಿತರಿಸಿ ಮಾತನಾಡಿದರು.
ಗುರುತಿನ ಕಾಡ್9 ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಸಂಘವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಚೆಕ್ ಪೋಸ್ಟ ಹಾಗೂ ಸರಕಾರಿ ಕಚೇರಿಗಳಲ್ಲಿ ಸಂಘದ ಗುರುತಿನ ಕಾಡ್9 ತೋರಿಸಿ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೋ ಕೆಲವರು ಈ ರೀತಿ ಮಾಡುವುದರಿಂದ ಇಡೀ ಪತ್ರಕರ್ತರ ಬಗ್ಗೆ ಜನರಲ್ಲಿರುವ ಗೌರವ ಭಾವನೆ ಕಡಿಮೆಯಾಗುತ್ತದೆ ಮಾತ್ರವಲ್ಲ, ಸಂಘಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವ ಸದಸ್ಯರೂ ಸಂಘದ ಗುರುತಿನ ಕಾಡ್9 ದುರುಪಯೋಗಪಡಿಸಿಕೊಳ್ಳಬಾರದು. ಸಂಘದ ಘನತೆಗೆ ಧಕ್ಕೆ ಉಂಟು ಮಾಡುವ ಯಾವ ಕೆಟ್ಟ ಕೆಲಸಕ್ಕೆ ಕೈಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.
ಡಿವಿಜಿ ಅವರು ಹುಟ್ಟುಹಾಕಿದ ಕಾನಿಪ ಸಂಘಕ್ಕೆ ಒಳ್ಳೆಯ ಹಿನ್ನೆಲೆ ಹಾಗೂ ಅದರದೇಯಾದ ಒಂದು ಇತಿಹಾಸವಿದೆ. ಈ ಸಂಘದ ಸದಸ್ಯರಾಗುವುದೇ ಒಂದು ಗೌರವ. ಸಂಘದ ಗೌರವ ಕಾಪಾಡುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದೆ ಎಂದರು.
ತ್ರಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ದೃಶ್ಯ ಮಾಧ್ಯಮ, ಸೋಶಿಯಲ್ ಮೀಡಿಯಾಗಳು ಎಷ್ಟೇ ವೇಗವಾಗಿ ಬೆಳೆದರೂ ಮುದ್ರಣ ಮಾಧ್ಯಮ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪತ್ರಿಕೆ ಗಳಿಗೆ ಮುಂದೆಯೂ ಅದರ ಮಹತ್ವ ಇದ್ದೇ ಇರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳ ಅಬ್ಬರದಿಂದಾಗಿ ಪ್ರಸಾರ ಹಾಗೂ ಓದುಗರ ಸಂಖ್ಯೆ ಮೊದಲಿಗಿಂತಲೂ ಈಗ ಕಡಿಮೆಯಾಗಿದ್ದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಏನೂ ಧಕ್ಕೆಯಾಗುವುದಿಲ್ಲ. ಪತ್ರಿಕೆಗಳಿಗೆ ಎಂದೂ ಸಾವಿಲ್ಲ ಎಂದು ಅವರು ಹೇಳಿದರು.