ದೇವಸ್ಥಾನದ ಶೆಡ್ ಮೇಲೆ ಉರುಳಿದ ತೆಂಗಿನ ಮರ
ದಾಂಡೇಲಿ 17: ನಗರದ ಕುಳಗಿ ರಸ್ತೆಯ ವನವಾಸಿ ಬಾಲಿಕಾ ನಿಲಯದ ಬಳಿ ಇರುವ ಗಾಳಿ ದುಗರ್ಾದೇವಿ ದೇವಸ್ಥಾನದ ಮುಂಬದಿಯ ಶೆಡ್ ಮೇಲೆ ಮಧ್ಯಾಹ್ನ 4 ಘಂಟೆಗೆ ಅನಿರೀಕ್ಷಿತವಾಗಿ ಮಳೆ ಹಾಗೂ ಅತಿ ವೇಗವಾಗಿ ಗಾಳಿ ಬಿಸಿದ ಪರಿಣಾಮ ತೆಂಗಿನ ಮರ ಅರ್ಧದಲ್ಲಿ ಮುರಿದು ಶೆಡ್ ಮೇಲೆ ಬಿದ್ದಿದೆ.
ಶೆಡ್ ಸಂಪೂರ್ಣವಾಗಿ ಜಖಂಗೊಂಡಿದೆ. ಈ ಸಮಯದಲ್ಲಿ ದೇವಸ್ಥಾನದಲ್ಲಿ ಯಾರು ಇಲ್ಲದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಆದರೆ ಮರ ಬಿದ್ದಿದರಿಂದ ಶೆಡ್ಗೆ ಹೆಚ್ಚಿನ ಹಾನಿ ಉಂಟಾಗಿದೆ. ಸುದ್ದಿ ತಿಳಿದು ತತ್ಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ವಿಶೇಷ ತಹಶೀಲ್ದಾರ ಶೈಲೆಶ್ ಪರಮಾನಂದ ಕುಲಂಕೂಷವಾಗಿ ಪರೀಕ್ಷಿಸಿ ಸುಮಾರು ಒಂದೂವರೆ ಲಕ್ಷದಷ್ಟು ಹಾನಿಯಾಗಿದೆಯೆಂದು ಅಂದಾಜಿಸಿದ್ದಾರೆ. ಅಲ್ಲದೇ ಈ ಸಮಯದಲ್ಲಿ ಪ್ರತಿಕ್ರಿಯಿಸಿದ ಇವರು ಸರಕಾರದ ಆರಾಧನಾ ಸ್ಕೀಮ್ ಮೂಲಕ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಚುನಾಯಿತ ಬಿಜೆಪಿ ಸದಸ್ಯ ರೋಶನ್ಜಿತ್ ದೇವಸ್ಥಾನದ ಕಮೀಟಿ ಅಧ್ಯಕ್ಷ ದುರ್ಗಪ್ಪಾ ಮುಂತಾದವರು ಉಪಸ್ಥಿತರಿದ್ದರು.