ಕಾರವಾರ

25 ರಿಂದ ಕರಾವಳಿ ಸಂಗಮೋತ್ಸವ

25 ರಿಂದ ಕರಾವಳಿ ಸಂಗಮೋತ್ಸವ

ಕಾರವಾರ 20: ಜಿಲ್ಲಾ ವಿದ್ಯಾರ್ಥಿ ಒಕ್ಕೂಟದಿಂದ ಫೆ.  25 ರಿಂದ 5 ದಿನಗಳ ಕಾಲ  ಕರಾವಳಿ ಸಂಗಮೋತ್ಸವ ಆಚರಿಸಲಾಗುವುದು ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಪ್ರತಿ ವರ್ಷ ಡ್ರಗ್ ಅವೆರ್ನೆಸ್ ಪ್ರಯುಕ್ತ ಕಾರ್ಯಕ್ರಮ ಮಾಡ್ತಿದ್ದೇವೆ . ಈ ವರ್ಷ ಮಯೂರವರ್ಮ ವೇದಿಕೆಯಲ್ಲಿ  ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ ಎಂದರು.  ಕರಾವಳಿ ಸಂಗಮೋತ್ಸವದಲ್ಲಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುವುದು.  

ಫೆ.25  ರಂದು ಸಚಿವ ಶಿವರಾಮ  ಹೆಬ್ಬಾರ್  ಉತ್ಸವ ಉದ್ಘಾಟಿಸುವರು. ಅತಿಥಿಗಳಾಗಿ ಶಂಕರ್ ಗೌಡ  ಪಾಟೀಲ್, ನಿವೃತ್ತ ಪೆÇಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ, ಐಟಿ ಉದ್ಯಮಿ ಮಲ್ಲನಗೌಡ ಪಾಟೀಲ್ , ಶಾಸಕಿ ರೂಪಾಲಿ ನಾಯ್ಕ, ಶಾಸಕರಾದ ದಿನಕರ ಶೆಟ್ಟಿ,ಸುನೀಲ್ ನಾಯ್ಕ, ಮಾಜಿ ಶಾಸಕ ಸುನೀಲ್ ಹೆಗಡೆ ಸತೀಷ ಸೈಲ್, ಆನಂದ ಅಸ್ನೋಟಿಕರ್ ಆಗಮಿಸಲಿದ್ದಾರೆ.  

ಸಾರ್ವಜನಿಕರು ಮಾಸ್ಕ ಧರಿಸಲು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಗುನಗಿ, ಚಂದ್ರಕಾಂತ ನಾಯ್ಕ, ಜಗನ್ನಾಥ ನಾಯ್ಕ,ಶಬ್ಬೀರ ಶೇಖ್ ,ಶ್ರೀಪಾದ ನಾಯ್ಕ, ನಿಲೇಶ ಕೊಳಂಬಕರ್ ಇದ್ದರು.

ಸುದ್ದಿ ಓದಿ