ಮಿನಿ ವಿಧಾನಸೌಧದ ಆವರಣ ಸ್ವಚ್ಛತೆ
ರಾಣೀಬೆನ್ನೂರ 16: ಸ್ಥಳೀಯ ಮಿನಿ ವಿಧಾನಸೌಧದ ಆವರಣವನ್ನು ತಹಶೀಲ್ದಾರ ಶಂಕರ್ ಜಿ.ಎಸ್ ಅವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ.
ತಹಶೀಲ್ದಾರರು ತಮ್ಮ ಸಿಬ್ಬಂದಿಯ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಗಳು ಹಾಗೂ ಸಿಬ್ಬಂದಿಯವರೊಂದಿಗೆ ಕಸದ ಕೊಂಪೆಯಾಗಿದ್ದ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗಿದ್ದಲ್ಲದೆ ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಜಾಗೃತಿ ಮೂಡಿಸಿ ಚಾಲನೆ ನೀಡಿದಂತಾಗಿದೆ.