ಚಿಕ್ಕೋಡಿ

ತೋರಣಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ತೋರಣಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮಾಂಜರಿ 11: ಸರ್ವಸಾಮಾನ್ಯ ಜನರ ಆರೋಗ್ಯ ರಕ್ಷಣೆಗಾಗಿ ಶುದ್ಧ ಕುಡಿಯುವ ನೀರು ಅವಶ್ಯಕತೆ ಇರುವುದರಿಂದ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ದೆಹಲಿ ಹಾಗೂ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಚಿಕ್ಕೋಡಿ ಮತ್ತು ಕೆಎಲ್‌ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಯುವ ಮುಖಂಡ ಅಮಿತ್ ಕೋರೆ ಇವರ ಜನಶಕ್ತಿ ಫೌಂಡೇಶನ್ ವತಿಯಿಂದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರನಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಶುದ್ಧ ಕುಡಿಯುವ ನೀರು ಘಟಕವನ್ನು ನಿರ್ಮಿಸಲಾಗಿದೆ. ಅದರ ಸದುಪಯೋಗ ಭಕ್ತರು ಹಾಗೂ ಸುತ್ತಮುತ್ತಲಿನ ಜನರು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕೋರೆ ಹೇಳಿದರು. 

ಅವರು ರವಿವಾರ ದಿ. 11ರಂದು ಚಿಕ್ಕೋಡಿ ತಾಲೂಕಿನ ತೋರಣ ಹಳ್ಳಿಯ ಹನುಮಾನ್ ದೇವಸ್ಥಾನ ಹತ್ತಿರ ಅಮಿತ್ ಕೋರೆ ಸ್ಥಾಪಿಸಿರುವ ಜನಶಕ್ತಿ ಫೌಂಡೇಶನ್ ವತಿಯಿಂದ ಅರ್ಪಿಸಿರುವ ಶುದ್ಧ ಕುಡಿಯುವ ನೇರ ಘಟಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ್ ಬನವಣೆ ಹಾಜರಿದ್ದರು. 

ಇಂದು ಹಲವಾರು ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯ ಇರುವುದಿಲ್ಲ ಅದರಿಂದ ಜನರು ಲಭ್ಯವಿರುವ ಹುಲಿಷಿತ ನೀರನ್ನು ಸೇವಿಸಿ ಹಲವಾರು ರೋಗಗಳಿಗೆ ತುತ್ತಾಗುತ್ತಾರೆ ಅದಕ್ಕಾಗಿ ಸರ್ವಸಾಮಾನ್ಯ ಜನರ ಆರೋಗ್ಯ ಕಾಪಾಡಲಿಕ್ಕೆ ಅಮಿತ್ ಕೋರೆ ಇವರ ಮುಂದಾಳತ್ವದಲ್ಲಿ ಸ್ಥಾಪಿಸಿರುವ ಜನಶಕ್ತಿ ಫೌಂಡೇಶನ್ ವತಿಯಿಂದ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಲಾಗಿದೆ ಎಂದು ಮಲ್ಲಿಕಾರ್ಜುನ್ ಕೋರೆ ಹೇಳಿದರು. 

ಗಣ್ಯರಿಂದ ಶುದ್ಧ  ಕುಡಿಯುವ ನೀರು ಘಟಕವನ್ನು ಉದ್ಘಾಟಲಾಯಿತು. ಮಾರುತ್ರಿ ದೇವಸ್ಥಾನ ಟ್ರಸ್ಟ್‌ ತೋರಣಹಳ್ಳಿ ಕಮಿಟಿಯ  ರಾಮಗೌಡಾ ಲಚ್ಚಪ್ಪಾ ಸಣ್ಣಲಚ್ಚಪ್ಪಗೊಳ್, ಭೀಮಾ ಲಚ್ಚಪ್ಪಾ ಸಣ್ಣಲಚ್ಚಪ್ಪಗೊಳ್, ಅಶೋಕ್ ನಾಗಪ್ಪ ಖಾಡೆ, ಬಸವರಾಜ ಲಕ್ಷಣ ಮಾಳಗೆ, ವಿಠಲ ಭೀಮಾ ಜೋಗೆ, ಪುಂಡಲೀಕ ರಾಮಾ ದೊಡ್ಡಲಚ್ಚಪಗೋಳ, ಕೆಂಪಣ್ಣ ಬಾಳಗೌಡ ಪಾಟೀಲ್, ಪಾಂಡುರಂಗ ಬಾಳಪ್ಪ ಸಣ್ಣಲಚ್ಚಪುಗೊಳ್, ಶಂಕರ ಕಲ್ಲಪ್ಪಾ ಬುನ್ನಟ್ಟ, ಅಣ್ಣಸಾಬ್ ಜೋಗೆ, ಹಣಬರ್ ಸಮಾಜ್ ಜಿಲ್ಲಾ ಅಧ್ಯಕ್ಷ ಶೀತಲ್ ಮುಂಡೆ ಹಾಗೂ ಇನ್ನಿತರರು ಹಾಜರಿದ್ದರು. 


ಸುದ್ದಿ ಓದಿ