ಜಮಖಂಡಿ

ಹದಿನೈದು ಅಡಿ ಕೆರೆಹಾವು ಕಂಡ ಪೌರಕಾರ್ಮಿಕರು ಕಕ್ಕಾಬಿಕ್ಕಿ

ಹದಿನೈದು ಅಡಿ ಕೆರೆಹಾವು ಕಂಡ ಪೌರಕಾರ್ಮಿಕರು ಕಕ್ಕಾಬಿಕ್ಕಿ

ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟ ಸ್ನೇಕ್ ಟೀಮ್  

ಜಮಖಂಡಿ 27: ನಗರದ ಗ್ರಾಮೀಣ ಪೋಲಿಸ್ ಠಾಣೆಯ ಆವರಣದಲ್ಲಿ ಹದಿನೈದು ಅಡಿ ಕೆರೆಹಾವನ್ನು ನೋಡಿದ ನಗರಸಭೆ ಪೌರಕಾರ್ಮಿಕರು ಕಕ್ಕಾಬಿಕ್ಕಿಯಾಗಿ ಓಡಾಡಿದ ಘಟನೆ ನಡೆದಿದೆ.  

ಗ್ರಾಮೀಣ ಪೋಲಿಸ ಠಾಣೆಯ ಎದುರುಗಡೆ ರಸ್ತೆಯ ಮೇಲೆ ಗೋದಿಬಣ್ಣದ ಹದಿನೈದು ಅಡಿಯ ಕೆರೆ ಹಾವೊಂದು ಪೋಲಿಸ ಠಾಣೆಯ ಕಾಂಪೌಂಡ್ ಒಳಗೆ ಜಿಗಿದು ಆವರಣದಲ್ಲಿ ಓಡಾಡಿತು. ಅಲ್ಲಿಯೇ ಕಸಗೂಡಿಸುವ ಮಹಿಳಾ ಪೌರಕಾರ್ಮಿಕರು ಕಕ್ಕಾಬಿಕ್ಕಿಯಾಗಿ ಓಡಾಡಿದರು. ಸ್ಥಳಿಯರು ಹಾಗೂ ಪೋಲಿಸ್ ಸಿಬ್ಬಂದಿಗಳ ಸಹಾಯದಿಂದ ರುದ್ರಸ್ವಾಮಿ ಪೇಠದ ಸ್ನೇಕ್ ಟೀಮ್‌ಗೆ ಪೋನ್ ಕರೆ ಮೂಲಕ ಕೆರೆ ಹಾವನ್ನು ಹಿಡಿಯಲಾಯಿತು.  

ರುದ್ರಸ್ವಾಮಿ ಪೇಠದ ಸ್ನೇಕ್ ಟೀಮ್‌ನ ಗುರುನಾಥ ತೇರದಾಳ, ಪ್ರೀತಮ ಮೀಶಿ, ಚೇತನ ದನ್ಯಾಳ, ಸಿದ್ದಾರೂಡ ಮೀಶಿ, ಸೋನು ಮೀಶಿ, ವಿಕಾಸ ಮೀಶಿ, ಉಮೇಶ ಸುತ್ತಾರ ಸೇರಿದಂತೆ ಅನೇಕರು ಸೇರಿ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು. 


ಸುದ್ದಿ ಓದಿ