ಯರಗಟ್ಟಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ
ಯರಗಟ್ಟಿ 23: ಪಟ್ಟಣದ ನಾಗರಿಕರು ಆರೋಗ್ಯವಂತರಾಗಿ ಓಡಾಡಿಕೊಂಡು ಇದ್ದೇವೆ ಎಂದರೆ ಅದಕ್ಕೆ ಪೌಕ ಕಾರ್ಮಿಕರ ಶ್ರಮ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಪೌರ ಕಾರ್ಮಿಕರನ್ನು ಗೌರವಿಸುವ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಹಶೀಲ್ದಾರ ಎಮ್. ಎನ್. ಮಠದ ಹೇಳಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯತ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಪಟ್ಟಣ, ನಗರ ಪ್ರದೇಶಗಳಲ್ಲಿ ದಿನನಿತ್ಯ ನಡೆಯುವ ಪೌರ ಕಾರ್ಮಿಕರ ಕಾಯಕದಿಂದ ನಾವೆಲ್ಲ ಉತ್ತಮ ಆರೋಗ್ಯಭರಿತರಾಗಿದ್ದೇವೆ. ಪೌರ ಕಾರ್ಮಿಕರ ಮತ್ತು ಅವರ ಕಾಯಕದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಭಿಮಾನ ಹೆಚ್ಚಿಸಿಕೊಳ್ಳಬೇಕು.
ಅಲ್ಲದೆ ರಾಜ್ಯ ಸರಕಾರ ಪೌರ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಈ ಬಾರಿಯೂ ಪೌರ ಕಾರ್ಮಿಕರನ್ನು ಕಾಯಂ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದರಂತೆ ನಡೆಯಲಿದ್ದಾರೆ. ಜತೆಗೆ ಪೌರಕಾರ್ಮಿಕರ ಕುಟುಂಬಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿದ್ದಾರೆ. ಜತೆಗೆ ಸರ್ಕಾರ ಉಚಿತವಾಗಿ ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ ಮಾತನಾಡಿ, ಪೌರ ಕಾರ್ಮಿಕರ ಕೆಲಸ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ ಪೌರಕಾರ್ಮಿಕರು ಸವಲತ್ತು ಪಡೆಯುವಲ್ಲಿ ಹಿಂದುಳಿದಿದ್ದಾರೆ. ಸರಕಾರದಿಂದ ಸಿಗಬೇಕಾದ ಸವಲತ್ತು ಸಿಗುವತ್ತೆ ಮಾಡಿಡುತ್ತೆನೆ. ಅವರನ್ನು ವಿದ್ಯಾವಂತರನ್ನಾಗಿ ಉನ್ನತ ಹುದ್ದೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನೀರೀಕ್ಷಕರು ಪಿ. ಎನ್. ಪಾಟೀಲ, ದ್ವಿತೀಯ ದರ್ಜೆ ಸಹಾಯಕರು ಎ. ಎಂ. ಬೆಳವಿ, ಪ. ಪಂ. ಸಿಬ್ಬಂದಿಗಳಾದ ಮಲಿಕ ಸಿಕ್ಕಲಗಿ, ರೇಣುಕಾ ಹಲಗಿ, ಅಡಿವಪ್ಪ ಇಟಗೌಡ್ರ, ಎಮ್. ಕೆ. ಜಮಾದಾರ, ರಾಜು ಹಿರೇಮಠ ಸೇರಿದಂತೆ ಪೌರ ಕಾಮಿಕರು ಇದ್ದರು.