ರಾಣೆಬೆನ್ನೂರ

ನಗರ ಯೋಜನಾ ಪ್ರಾಧಿಕಾರ: ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ನಗರ ಯೋಜನಾ ಪ್ರಾಧಿಕಾರ: ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ರಾಣೆಬೆನ್ನೂರು 17:  ಇಲ್ಲಿನ ಶ್ರೀರಾಮ ನಗರದ ನಗರ ಯೋಜನಾ ಪ್ರಾಧಿಕಾರದ ಕಾರ್ಯಾಲಯ ಆವರಣದಲ್ಲಿ. ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ನರಸಗೊಂಡರ್ ಅವರು ಅಮೃತ ಮಹೋತ್ಸವದ 75ನೇ ಸ್ವಾತಂತ್ರ್ಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಅಂದು ನಮ್ಮ ಹಿರಿಯರು ಮಾಡಿದ ತ್ಯಾಗ ಫಲದಿಂದಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸರಳವಾಗಿ ಸಿಕ್ಕಿಲ್ಲ ಅನೇಕ ವರ್ಷಗಳ ಹೋರಾಟ ಇದರ ಹಿಂದಿದೆ ಎನ್ನುವ ವಾಸ್ತವಿಕ ಸತ್ಯವನ್ನು ನಮ್ಮ ಯುವ ಸಮುದಾಯ ಅರಿತುಕೊಂಡು, ದೇಶದ ಸಮಗ್ರ ಮುನ್ನಡೆಗೆ ಮುಂದಾಗಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತ ವಹಿಸಿದ್ದ  ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಅಮೃತ ಮಹೋತ್ಸವ ಸ್ಮಾರಕವನ್ನು ಉದ್ಘಾಟಿಸಿದರು..ಜಿಪಂ ಮಾಜಿ ಸದಸ್ಯಮಂಗಳಗೌರಿ ಪೂಜಾರ್,ಸದಸ್ಯ ಕಾರ್ಯದರ್ಶಿಗಳಾದ ರವಿಕಿರಣ್ ಬಿ. ಆರ್‌.,ವ್ಯವಸ್ಥಾಪಕ ಆರ್‌. ಕೆ.ಆ ದ್ವಾನಿ ಮಠ,ಸದಸ್ಯರಾದ ಗೀತಾ ಜಂಬಿಗಿ, ಬಸವರಾಜ ಚಿಮ್ಮಲಗಿ, ರವಿ ತಳವಾರ, ಮಣಿ ಪವಾರ, ಪೂರ್ಣಿಮಾ ಹಿರೇಮಠ, ರಾಕೇಶ್ ರೆಡ್ಡೇರ, ವೀರೇಶ ಹಿರೇಮಠ ಸೇರಿದಂತೆ ಮತ್ತಿತರ ಗಣ್ಯರು. ಪ್ರಾಧಿಕಾರದ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ