ಶಿಗ್ಗಾವ್

ಪೌರಕಾರ್ಮಿಕರ ಸೇವೆ ನಿಜವಾದ ಸೇವೆ : ಕಿರಣ ಅವರಾದಿ

ಪೌರಕಾರ್ಮಿಕರ ಸೇವೆ ನಿಜವಾದ ಸೇವೆ : ಕಿರಣ ಅವರಾದಿ

ಶಿಗ್ಗಾವಿ 04: ಕೊರೋನಾ ವಾರಿಯರ್ಸ್‌ ಸೇವೆ ಅದರಲ್ಲೂ ಪುರಸಭೆಯ ಪೌರಕಾರ್ಮಿಕರ ಸೇವೆ ಯಾರು ಮಾಡದ ಪಟ್ಟಣ ಸ್ವಚ್ಚಗೊಳಿಸುವ ಸೇವೆ ನಿಜವಾದ ಸೇವೆ ಎಂದು ಕಾಂಗ್ರೆಸ ಮುಖಂಡ ಕಿರಣ ಅವರಾದಿ ಹೇಳಿದರು. 

ಪಟ್ಟಣದ ಕಾಂಗ್ರೆಸ್ ಮುಖಂಡ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕ ಶ್ರೀಕಾಂತ ದುಂಡಿಗೌಡ್ರ ಹುಟ್ಟು ಹಬ್ಬದ ನಿಮಿತ್ಯ ಪೌರಕಾರ್ಮಿಕರಿಗೆ ಆಹಾರ ಕಿಟ್, ಸ್ಟ್ರೀಮ ಉಪಕರಣ ವಿತರಣೆ ಮಾಡಿ ಮಾತನಾಡಿ ಸಹೋದರ ಶ್ರೀಕಾಂತ ದುಂಡಿಗೌಡ ಜಿಲ್ಲೆಯಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದು ಅವರಿಗೆ ದೇವರು ಆಯುಷ್ಯ, ಆರೋಗ್ಯ, ಸಂಪತ್ತು ಹಾಗೂ ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲಿ ಎಂದರು. 

ಗುತ್ತಿಗೆದಾರ ಮುಂಜುನಾಥ ದುಭೆ ಮಾತನಾಡಿ ತಾಲೂಕಿನಲ್ಲಿ ಯುವಕರ ಸಮಸ್ಯೆಗೆ ಸ್ಪಂದಿಸುವ ಏಕೈಕ ನಾಯಕ ಅದು ಶ್ರೀಕಾಂತ ದುಂಡಿಗೌಡ್ರ ಅವರಿಗೆ ದೇವರು ಇನ್ನೂ ಹೆಚ್ಚಿನ ಜನಸೇವೆ ಮಾಡಲು ಅವಕಾಶ ಮಾಡಿಕೊಡಲಿ ಎಂದು ಹಾರೈಸಿದರು. 

ಪುರಸಭೆಯ ಶೈಲಜಾ ಪಾಟೀಲ, ವಿ.ಎಸ್‌.ಪಾಟೀಲ, ಕಾಂಗ್ರೇಸ ಯುವ ಮುಖಂಡರಾದ ಮಹಾಂತೇಶ ಸಾಲಿ, ನವೀನ ಸಾಸನೂರ ವಿಶ್ವನಾಥ ಗಾಣಗೇರ, ಆರ್‌.ಜಿ.ಪಾಟೀಲ, ಸುಮಿತ ಸೂರ್ಯವಂಶಿ, ಶಂಭು ನೆರ್ತಿ, ಸರತಾಜ ಹಾನಗಲ್ಲ, ವಿಜಯ ತಡಸ, ಸಾಧಿಕ ಸವಣೂರ, ತಹಮೀದ ಖಾಜೀ, ರಬ್ಬಾನಿ ತರೀನ, ಆಕಾಶಗೌಡ ಪಾಟೀಲ ಸೇರಿದಂತೆ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದ ಸದಸ್ಯರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು. 

ಭಾರತ ಸೇವಾ ಸಂಸ್ಥೆ (ರಿ) ಬನ್ನೂರ ಸಾರ್ವಜನಿಕರ ಸೇವೆಗೆ ಸದಾ ಸಿದ್ದ ಇದು ಶ್ರೀಕಾಂತ ದುಂಡಿಗೌಡ್ರ ಕನಸು ತಾಲೂಕಿನಲ್ಲಿರುವ ಜನತೆಗೆ ಏನು ತೊಂದರೆ ಆಗಬಾರದು ಎಂಬ ಮುಖ್ಯ ಉದ್ದೇಶ.  

ನವೀನ ಸಾಸನೂರ

ಕಾಂಗ್ರೇಸ ಯುವ ಮುಖಂಡ 


ಸುದ್ದಿ ಓದಿ