ಮೆನಸಿನಕಾಯಿ ಖಾರ ಜನಸಾಮನ್ಯರಿಗೆ ಖಾರ
ಉತ್ಪಾದನೆ ಕಡಿಮೆ* ನೋವಿನ ಮೇಲೆ ಬರೆಯಂತಾದ ದುಬಾರಿ ಬೆಲೆ
ಮಾಂಜರಿ 24 : ನಿತ್ಯದ ಬದುಕಿನಲ್ಲಿ ಅಗತ್ಯವಾದ ವಸ್ತುಗಳಾದ ಸಕ್ಕರೆ, ಬೆಲ್ಲ, ಉಪ್ಪು, ಎಣ್ಣೆ ಮತ್ತು ಖಾರ ಬೇಕೆಬೇಕು. ಆದರೆ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದಾಗಿ ಮೆನಸಿನಕಾಯಿ ಬೆಳೆ ಉತ್ಪಾದನೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಾಗಿದ್ದರಿಂದ ಪ್ರತಿಕಿಲೋ 100 ರಿಂದ 150 ರೂ ಬೆಲೆ ಹೆಚ್ಚಾಗಿದ್ದು, ಜನಸಾಮಾನ್ಯರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಐಶಾರಾಮಿ ಜೀವನದ ಅನೇಕ ವಸ್ತುಗಳ ಬೆಲೆ ದುಬಾರಿಯಾದರೂ ಬಡವರ ಬದುಕಿನಲ್ಲಿ ಪರಿಣಾಮವಾಗುವುದಿಲ್ಲ ಆದರೆ ನಿತ್ಯಾವಶ್ಯಕ ದಿನಸಿ ಬೆಲೆಗಳ ಏರಿಕೆ ಬಡವರನ್ನು ಸಂಕಷ್ಟಕ್ಕೆ ಒಳಪಡಿಸದೇ ಇರಲಾರದು. ಇಂದಿನ ತುಟ್ಟಿಯ ದಿನಮಾನದಲ್ಲಿ ಹೊಟ್ಟೆ ಹೊರುವುದೇ ಕಷ್ಟವಾಗಿದೆ. ದೊರೆಯುವ ಕೂಲಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟಸಾಧ್ಯ. ಒಂದು ದಿನದ ಕೂಲಿಯ ಹಣದಲ್ಲಿ ಒಂದು ಕಿಲೋ ಸಕ್ಕರೆ ಮತ್ತು ಬೆಲ್ಲ ಮಾತ್ರ ಕೊಳ್ಳಬಹುದು. ಆದರೆ ಉಳಿದ ದಿನಸಿಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಇಂಥದರಲ್ಲಿ ನಿತ್ಯ ಬೇಕಾಗುವ ಮೆನಸಿನಕಾಯಿ ಬೆಲೆ ನಂಜಿನಂತೆ ಏರತೊಡಗಿದೆ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಶೇ 40 ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಗಡಿಭಾಗದ ಹಾಗೂ ನದೀತೀರದ ರೈತರು ಮೇನಸಿನಕಾಯಿ ಮಾರುಕಟ್ಟೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಾರಾಟಕ್ಕೆ ಬರುತ್ತಿದ್ದು, ಕಳೆದ ಸಾಲಿನಲ್ಲಿ ಜವಾರಿ 160 ರಿಂದ 200 ರೂ ಮಾರಾಟ ವಾಗಿತ್ತು ಆದರೆ ಪ್ರಸಕ್ತ ಸಾಲಿನಲ್ಲಿ 200 ರಿಂದ 240 ರೂ ಮಾರಾಟ ವಾಗುತ್ತಿದೆ, ಬ್ಯಾಡಗಿ ಕಳೆದ ಸಾಲಿನಲ್ಲಿ 225 ರಿಂದ 250 ರೂ ಮಾರಾಟವಾಗಿತ್ತು, ಪ್ರಸಕ್ತ ಸಾಲಿನಲ್ಲಿ 400 ರಿಂ 450 ರೂ ಮಾರಾಟವಾಗುತ್ತಿದೆ, ಗುಂಟೂರು ಕಳೆದ ಸಾಲಿನಲ್ಲಿ 150 ರಿಂದ 180 ರೂ ಮಾರಾಟವಾಗಿತ್ತು, ಪ್ರಸಕ್ತಸಾಲಿನಲ್ಲಿ 220 ರೂ 260 ರೂ ಕಿಲೊ ಮಾರಾಟವಾಗುತ್ತಿದೆ. ಜ್ವಾಲಾ ಕಳೆದ ಸಾಲಿನಲ್ಲಿ 160 ರಿಂದ 190 ರೂ ಕಿಲೂ ಮಾರಾಟವಾಗುತ್ತಿತ್ತು, ಪ್ರಸಕ್ತ ಸಾಲಿನ 300 ರಿಂದ 360 ರೂ ಕಿಲೊ ಮಾರಾಟ ವಾಗುತ್ತಿದೆ, ಸಂಕೇಶ್ವರಿ ಕಳೆದ ಸಾಲಿನಲ್ಲಿ 160 ರಿಂದ 200 ರೂ ಮಾರಾಟವಾಗಿತ್ತು, ಪ್ರಸಕ್ತಸಾಲಿನಲ್ಲಿ 350 ರೂ 240 ರೂ ಕಿಲೊ ಮಾರಾಟವಾಗುತ್ತಿದೆ. ಸಾದಾ ಕಳೆದ ಸಾಲಿನಲ್ಲಿ 120 ರಿಂದ 160 ರೂ ಮಾರಾಟವಾಗಿತ್ತು, ಪ್ರಸಕ್ತಸಾಲಿನಲ್ಲಿ 200 ರೂ 300 ರೂ ಕಿಲೊ ಮಾರಾಟವಾಗುತ್ತಿದೆ.
ಮೆನಸಿನಕಾಯಿ ಬೆಲೆ ದುಬಾರಿಯ ಜೋತೆಗೆ ಮೆನಸಿನಕಾಯಿ ಖಾರ ಮಾಡಲು ಬೇಕಾದ ಮಸಾಲೆ ಪದಾರ್ಥಗಳ ಬೆಲೆ ದುಬಾರಿಯಾಗಿವೆ ಇದರಿಂದಾಗಿ ಜನಸಾಮನ್ಯರಿಗೆ ಮೆನಸಿನಕಾಯಿ ಖಾರ ಜನಸಾಮನ್ಯರಿಗೆ ಖಾರವಾಗಿ ಪರಿಣಮಿಸುತ್ತಿರುವುದು ಮಾತ್ರ ಸತ್ಯ!