ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಾಂತ್ರಿಕ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು
ಲೋಕದರ್ಶನ ವರದಿ
ಶಿಗ್ಗಾವಿ 14: ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಾಂತ್ರಿಕ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಪಿನಿಕ್ಸ್ ಶಾಲೆಯ ಅಧ್ಯಕ್ಷ ಡಾ.ಮೃತ್ಯುಂಜಯ ತಿರ್ಲಾಪೂರ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ಯ ಜವಾಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಪ್ರಶಸ್ತಿ ನೀಡಿ ಮಾತನಾಡಿ ಮಕ್ಕಳಿಗೆ ಶುಭಾಶಯ ಕೋರಿ ಇಂದಿನ ದಿನಮಾನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕ್ರಾಂತಿಗಳಾಗಿ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ದೊರಕಿದ್ದು ದಿನದಿಂದ ದಿನಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದ್ದು ಆ ನಿಟ್ಟಿನಲ್ಲಿ ವಿಧ್ಯಾರ್ಥಿಗಳಾದ ನಾವು ಅದಕ್ಕೆ ಬದ್ದರಾಗಿರ ಬೇಕಾಗುತ್ತದೆ ಆದ್ದರಿಂದ ತಾವುಗಳು ನಿರಂತರವಾಗಿ ವಿಧ್ಯಾಬ್ಯಾಸ ಮಾಡಿ ಯಶಸ್ಸನ್ನು ಪಡೆದರೆ ಮುಂದಿನ ದಿನಗಳಲ್ಲಿ ನೀವು ಅಂದು ಕೊಂಡು ಹುದ್ದೆ ಹಾಗೂ ಸ್ಥಾನಮಾನ ಅಲಂಕರಿಸಬಹುದು ಎಂದರು.
ಪಿನಿಕ್ಸ ಶಾಲೆಯ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ ಮಾತನಾಡಿ ಶಾಲೆಯಲ್ಲಿ ಗುರುಗಳು ಹೇಳಿದ ವಿದ್ಯಾಭ್ಯಾಸವನ್ನು ಮನೆಯಲ್ಲಿ ಹೋಗಿ ಮತ್ತೋಮ್ಮೆ ಅದನ್ನು ಪುನರ ಮನನ ಮಾಡಿ ಅಂದಿನ ವಿಷಯವನ್ನು ಅಂದೇ ಮನದಟ್ಟು ಮಾಡಿ ಅಲ್ಲದೇ ದೈನಂದಿನ ದಿನಪತ್ರಿಕೆ, ದೂರದರ್ಶನ ಸುದ್ದಿ ಸಮಾಚಾರ ವೀಕ್ಷಣೆ ಮಾಡಿದರೆ ನಮ್ಮ ಬುದ್ದಿಮಟ್ಟವನ್ನು ಸುಧಾರಿಸಿಕೊಂಡು ನಮ್ಮ ಗುರಿಯನ್ನು ನಾವು ಸಾಧಿಸಬಹುದು ಎಂದರು.
ಮುಖ್ಯೋಪಾದ್ಯಾಯ ಎಫ್.ಎ.ಮೂಲಿಮನಿ ಮಾತನಾಡಿ ಕೊರೋನಾ ಸೋಂಕಿನಿಂದ ಸುಮಾರು ಎರಡು ವರ್ಷಗಳ ಕಾಲ ಮಕ್ಕಳ ವಿಧ್ಯಾಬ್ಯಾಸದ ಸ್ಥಿತಿಯು ಸೋಜಿಗ ಸ್ಥಿತಿಯಲ್ಲಿತ್ತು ಈಗ ಪುನ: ಮತ್ತೇ ನೈಜ ಸ್ಥಿತಿಗೆ ಬಂದದ್ದು ನಮ್ಮೇಲ್ಲರ ಪುಣ್ಯ ಆದ್ದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷಿಸದೇ ವಿಧ್ಯಾಬ್ಯಾಸಕ್ಕೆ ಹೆಚ್ಚಿನ ಪ್ರೇರಣೆ ನೀಡುವ ಉತ್ತಮ ಪರಿಸರ ಹೊಂದಿರುವ ಶಾಲೆ ಅದು ಪಿನಿಕ್ಸ ಶಾಲೆ ಮಾತ್ರ ಎಂದರು.
ಈ ಸಂದರ್ಭದಲ್ಲಿ ಪಿನಿಕ್ಸ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.