ಯರಗಟ್ಟಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು: ಭಾಸ್ಕರ ಹಿರೇಮೆತ್ರಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು: ಭಾಸ್ಕರ ಹಿರೇಮೆತ್ರಿ

ಯರಗಟ್ಟಿ 05: ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಹಿರಿಯ ದಲಿತ ಮುಖಂಡ ಭಾಸ್ಕರ ಹಿರೇಮೆತ್ರಿ ಹೇಳಿದರು.  

ಪಟ್ಟಣದ ಅಂಬೇಡ್ಕರ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವವಾರ್ಷಿಕ ಸ್ನೇಹ ಸಮ್ಮೇಳನ ಅಭಿವದ್ಧಿಗಾಗಿ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಸಿ ಆರ್ ಪಿ ವಸಂತ ಬಡಿಗೇರ ಹೇಳಿದರು.ಈ ಸಂದರ್ಭದಲ್ಲಿ ವಿ. ಎಂ. ಮರಡಿ, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ರಫೀಕ್ ಡಿ ಕೆ, ಸಂತೋಷ ಚನ್ನಮೇತ್ರಿ, ಶ್ರೀಮತಿ ಬಿ. ಕೆ. ಪಾಟೀಲ, ಬಾಬು ಚನ್ನಮೇತ್ರಿ, ಹನುಮಂತ ತಳವಾರ, ಯಕ್ಕೇರೆಪ್ಪ ಮಾಳಗಿ, ಮಲಿಕ ಚಾಂದಖಾನವರ, ಮಹ್ಮದ ಶೀಗಿಹಳ್ಳಿ, ಶಾನೂರ ಕಮತಗಿ, ಮುಖ್ಯೋಪಾಧ್ಯಾಯ ಪಿ. ಎಂ. ತಳವಾರ ಸೇರಿದಂತೆ ಶಾಲಾ ಶಿಕ್ಷಕ ವೃಂದ ಮತ್ತು ಮಕ್ಕಳ ಇದ್ದರು. 


ಸುದ್ದಿ ಓದಿ