ತಾಳಿಕೋಟಿ

ಕುಡಿಯುವ ನೀರಿಗಾಗಿ ಮಕ್ಕಳ ಪರದಾಟ

ಕುಡಿಯುವ ನೀರಿಗಾಗಿ ಮಕ್ಕಳ ಪರದಾಟ

ಮೂಲಭೂತ ಸೌಕರ್ಯವಂಚಿತ ಬಿ. ಸಾಲವಾಡಗಿ ಸರಕಾರಿ ಬಡಾವಣೆ ಶಾಲೆ 

ತಾಳಿಕೋಟಿ04: ಸಮೀಪದ ಬಿ.ಸಾಲವಾಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾತಮಿಕ ಬಡಾವಣೆ ಶಾಲೆಯಲ್ಲಿ ಮೂಲಭೂತ ಸೌಕರ್ಯವಾಗಿರುವ ಕುಡಿಯು ನೀರು, ಇಲ್ಲದೇ ಇರುವುದರಿಂದ ಇಲ್ಲಿಯ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 

ತಾಲೂಕಿನ ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಬಿ.ಸಾಲವಾಡಗಿ ಗ್ರಾಮದ 4ನೇ ವಾರ್ಡಿನಲ್ಲಿರುವ ಈ ಶಾಲೆಯಲ್ಲಿ ಆರಂಭದ ದಿನದಿಂದ ಇಲ್ಲಿಯವರೆಗೆ ಮಕ್ಕಳಿಗೆ ಕುಡಿಯುವ ನೀರು ಇಲ್ಲದೆ ಇರುವುದು ನಮ್ಮ ಇಂದಿನ ಹದಗೆಟ್ಟ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಕಡ್ಡಾಯವಾಗಿ ಇರಬೇಕೆಂಬುದು ಸರಕಾರದ ನಿಯಮವಾಗಿದೆ. ಆದರೆ ಈ ನಿಯಮ ಕೆವಲ ಆದೇಶಕ್ಕೆ ಸಿಮಿತವಾಗಿ ಕಾರ್ಯರುಪಕ್ಕೆ ಬರುತ್ತೀಲ್ಲ. 

ಈ ಶಾಲೆಯಲ್ಲಿ 117 ಮಕ್ಕಳು ಓದುತ್ತಿದ್ದಾರೆ 4 ಜನ ನೂರಿತ ಶಿಕ್ಷಕರಿದ್ದು ಎಲ್ಲರೂ ನಮ್ಮ ಶಾಲೆಯ ಮಕ್ಕಳು ಕಲಿಕೆಯಲ್ಲಿ ಎಲ್ಲರಿಗಿಂತಲೂ ಮುಂದಿರಬೆಕೆಂದು ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಆದರೆ ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಈ ಗ್ರಾಮದಲ್ಲಿ ಗ್ರಾಮ ಪಂಚಾಯತಿಯು ಇದೆ, ಶಾಲೆಯ ಮುಖ್ಯಸ್ಥರು ಹಾಗೂ ಶಾಲಾ ಸಮೀತಿಯ ಅಧ್ಯಕ್ಷರು ಹಲವಾರು ಬಾರಿ ಈ ಸಮಸ್ಯೆಯನ್ನು ಪರಿಹರಿಸಲು ಗ್ರಾಮ್ ಪಂಚಾಯತ ಹಾಗೂ ತಾಲೂಕ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೆ ಸೂಕ್ತವಾದ ಸ್ಪಂದನೆ ಇಲ್ಲಿಯವರೆಗೆ ಸಿಕ್ಕಿಲ್ಲ.  

ಮದ್ಹ್ಯಾನದ ಬಿಸಿ ಊಟ ಸಿದ್ಧತೆಗೆ ಹೆಚ್ಚು ನೀರುಬೇಕು ಆದರೆ ಇಲ್ಲಿ ಸಮಸ್ಯೆಯಿಂದಾಗಿ ಕೆವಲ ಎರಡೆ ಎರಡು ಕೊಡ ನೀರಿನಲ್ಲಿ ಅಡಿಗೆ ಮಾಡುವ ಅನಿವಾರ್ಯತೆ ಇದೆ. ಮಕ್ಕಳು ಕುಡಿಯಲು ಮನೆಯಿಂದಲೆ ನೀರು ತರಬೇಕು. ಅದು ಮುಗಿದು ಹೊದಾಗ ಮತ್ತೆಮನೆಗೆ ಹೊಗುವಹಾಗಿಲ್ಲ ಬೆಸಿಗೆಯಲ್ಲಂತು ಈ ಮಕ್ಕಳ ಸ್ಥಿತಿ ನೋಡುವ ಹಾಗಿರಲಿಲ್ಲ ಎನ್ನುತ್ತಾರೆ ಇಲ್ಲಿಯ ಶಿಕ್ಷಕರು. ಇನ್ನೂ ಈ ಶಾಲೆಗೆ ಕಂಪೌಂಡ ಗೋಡೆ ಇಲ್ಲದಿರುವುದರಿಂದ ಇಲ್ಲಿ ರಾತ್ರಿಯಲ್ಲಿ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಶೌಚಾಲಯ ಇದ್ದರೂ ಬಳಕೆಗೆ ನೀರಿಲ್ಲ, ಶಾಲೆಯ ಮೈದಾನದಲ್ಲಿ ನೀರಿನ ಗುಮ್ಮಿ ಇದ್ದರೂ ಅದರಲ್ಲಿ ನೀರಿಲ್ಲ ಅದು ಹಾಳಾಗಿ ಹೋಗುತ್ತಿದೆ.  

ಈ ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ ಸಮೀಪದ ಮಾಳನೂರ ಕೆರೆಯಿಂದ ಸಿಹಿ ನೀರು ಈ ಗ್ರಾಮಕ್ಕೆ ಸರಬರಾಜಾಗುತ್ತಿದೆ ಆದರೆ ಇದಕ್ಕೆ ಪೈಪಲೈನ್ ವ್ಯವಸ್ಥೆ ಅಳವಡಿಸಿ ಈ ಶಾಲೆಯ ಗುಮ್ಮಿಗೆ ಸಂಪರ್ಕ ಕೊಡಬೇಕಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಗಂಬೀರ ಸಮಸ್ಯೆಯನ್ನು ಪರಿಹರಿಸಲೂ ಕ್ರಮ ವಹಿಸಬೇಕಾಗಿದೆ. ಈ ಭಾಗದ ಶಾಸಕರು ಕೂಡ ಕ್ಷೇತ್ರದ ಜನರ ಸಮಸ್ಯೆಗಳನ್ನು ತಿಳಿದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ಮಾಡಬೇಕಾಗಿದೆ.  

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಶಾಲೆಯ ವತಿಯಿಂದ ಇಗಾಗಲೇ ಹಲವಾರು ಬಾರಿ ಗ್ರಾಮ ಹಾಗೂ ತಾಲೂಕ ಪಂಚಾತಯ್ ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟರೂ ಇಲ್ಲಿಯವರೆಗೆ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇದು ನಿರಾಶೇಯ ವಿಷಯವಾಗಿದೆ.  

-ದುರ್ಗೇಶ ವಂದಗನೂರ 

ಅಧ್ಯಕ್ಷರು ಎಸ್‌.ಡಿ.ಎಮ್‌.ಸಿ 


ಸುದ್ದಿ ಓದಿ