ತಾಳಿಕೋಟಿ

ಮಕ್ಕಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ: ಮಿರ್ಜಿ

ಮಕ್ಕಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ: ಮಿರ್ಜಿ


ತಾಳಿಕೋಟೆ 12: ಜೀವನದಲ್ಲಿ ಜೀವನ ಒಂದು ಪರೀಕ್ಷೆ ಆದರೆ ಕಲಿಕೆಯಲ್ಲಿ ಪರೀಕ್ಷೆ ಮತ್ತೊಂದು ಹಂತ ಈ ಹಂತವನ್ನು ಸ್ಥೈರ್ಯದಿಂದ ಎದುರಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಮೊದಲ ಘಟ್ಟವಾಗಿದ್ದು, ಮಕ್ಕಳು ಧೃತಿಗೆಡದೆ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಜಿ.ಮಿರ್ಜಿ ಹೇಳಿದರು. 

ಅವರು ಪಟ್ಟಣದ ಪಟ್ಟಣದ ಎಂ.ಜಿ.ಎಂ.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2021-22 ನೇ ಸಾಲಿನ ಎಸ್‌.ಎಸ್‌.ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮತನಾಡಿದರು. 

ಪ್ರತಿಯೊಬ್ಬ ವಿದ್ಯಾರ್ಥಿಗಳು ಶಾಲೆಯಲ್ಲಿ ಮಾಡಿದ ಪಾಠವನ್ನು ಪ್ರತಿ ದಿನ ಅಭ್ಯಾಸ ಮಾಡು. ಸಮಯವನ್ನು ಹಾಳು ಮಾಡದೇ ಓದುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಧೈರ್ಯದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸಿ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಜಿಎಂಕೆ ಶಾಲೆಯ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ವಹಿಸಿದ್ದರು. ಪ್ರೊಮೊ ಇಂಗ್ಲೀಷ್ ಅಕಾಡೆಮಿ ಅಧ್ಯಕ್ಷ ಪ್ರಶಾಂತ ಮೋಟಗಿ, ಮುದ್ದೇಬಿಹಾಳ ಎಸ್‌.ಎಸ್‌.ಪಿಯು ಕಾಲೇಜು ಪ್ರಾಚಾರ್ಯ ರಾಜು ನಲವಡೆ, ಬಿಆರ​‍್ಿಗಳಾದ ಎಸ್‌.ಎಸ್‌.ರಾಮತಾಳ, ಆರ್‌.ಎಸ್‌.ದೊಡಮನಿ, ಎಂಜಿಎಂಕೆ ಪ್ರಾಚಾರ್ಯ ಎಸ್‌.ಕೆ.ಹರನಾಳ, ಮುಖ್ಯಶಿಕ್ಷಕಿ ಪಿ.ಡಿ.ಮಹೇಂದ್ರಕರ ಇದ್ದರು. ಶಿಕ್ಷಕ ಭೀಮನಗೌಡ ಸಾಸನೂರ ನಿರೂಪಿಸಿದರು. ವಿ.ಎಸ್‌.ವೀರಗಂಟಿಮಠ ಸ್ವಾಗತಿಸಿದರು. ವಿ.ಪಿ. ಲಾತೂರಕರ ವಂದಿಸಿದರು. 


ಸುದ್ದಿ ಓದಿ