ರಾಣೆಬೆನ್ನೂರ

ಕುರುಬ ನೌಕರರ ಸಮಾವೇಶ ಸಮಾನತೆ ಸಾಧಿಸಲು ಮಕ್ಕಳು ಶಿಕ್ಷಣವಂತರಾಗಬೇಕು

ಕುರುಬ ನೌಕರರ  ಸಮಾವೇಶ ಸಮಾನತೆ ಸಾಧಿಸಲು ಮಕ್ಕಳು ಶಿಕ್ಷಣವಂತರಾಗಬೇಕು

ರಾಣೆಬೆನ್ನೂರು 25:  ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ ಕುರುಬ ಸಮುದಾಯದ ಮಕ್ಕಳು ಇತರರಂತೆ ಪರಿಪೂರ್ಣ ಶಿಕ್ಷಣವಂತ ರಾಗಬೇಕು ಅಂದಾಗ ಮಾತ್ರ ಸಾಮಾಜಿಕ, ಆರ್ಥಿಕ- ಮತ್ತು ಸಾಂಸ್ಕೃತಿಕವಾಗಿ ಸಮಾನತೆ ಹೊಂದಲು ಸಾಧ್ಯವಾಗುವುದು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ನುಡಿದರು. ಅವರು ಇಲ್ಲಿನ ಹೂರ ಬೀರಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ತಾಲೂಕ ಕುರುಬ ನೌಕರರ ಸಂಘ, ತಾಲೂಕ ಪ್ರವೇಶ ಕುರುಬರ ಸಂಘ ಮತ್ತು ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ, ಭಕ್ತ ಶ್ರೇಷ್ಠ ಕನಕದಾಸರ ಜಯಂತೋತ್ಸವ, ಕುರುಬ ನೌಕರರ ಸಮಾವೇಶ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ  ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಗಣ್ಯರ  ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ಮಾತನಾಡಿದರು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಭೆ ಎಲ್ಲರಲ್ಲೂ ಇದ್ದೇ ಇರುತ್ತದೆ, ಪ್ರತಿಭೆ ಹೊರಸೂಸಲು, ತಂದೆ-ತಾಯಿ, ಗುರು-ಹಿರಿಯರು ಮತ್ತು ಸಮಾಜ ಪ್ರೋತ್ಸಾಹ ನೀಡಬೇಕಾಗುತ್ತದೆ ಎಂದ ಶ್ರೀಗಳು ಸಮಾಜದ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಏಕೈಕ ಉದ್ದೇಶದಿಂದ ಜಗದ್ಗುರು ಪೀಠವು ಬೆಳ್ಳೂಡಿ ಕ್ಷೇತ್ರದಲ್ಲಿ ಕೆಎಎಸ್ ಐಎಎಸ್ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ, ಯಾವುದೇ ಮಡಿವಂತಿಕೆ ಇಲ್ಲದೇ, ಸಮಾಜದ ಮಕ್ಕಳು ಮುಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಮತ್ತು ಸಮಾಜಕ್ಕೆ ತಂದೆ-ತಾಯಿಗಳಿಗೆ ಗೌರವ ತರಬೇಕು ಎಂದರು. ಒಬ್ಬರು ಶಾಸಕರಾದ ಬೇಕಾದರೆ, ಜನರ ಪ್ರೀತಿ ವಿಶ್ವಾಸ ಗಳಿಸಬೇಕು, ಅವರ ಅವಧಿ  ಕೇವಲ ಐದು ವರ್ಷ ಮಾತ್ರ, ಆದರೆ ಶಿಕ್ಷಣವಂತರಾದರೆ  ಯಾವುದೇ ಅವಧಿ ಮಿತಿ ಇಲ್ಲ, ಅರವತ್ತು ವರ್ಷಗಳ ಕಾಲ ನಿಶ್ಚಿಂತೆಯಿಂದ, ಸಮಾಜದ ಜೊತೆ ಬೆರೆತು, ಕುಟುಂಬವನ್ನು ಶಾಶ್ವತವಾಗಿ ಸುಖವಾಗಿರಿಸಬಹುದು ಎಂದು ಬಹು ಮಾರ್ಮಿಕವಾಗಿ ಶ್ರೀಗಳು ನುಡಿದರು. ವಿಧಾನಪರಿಷತ್ ಸದಸ್ಯ ಆರ್‌. ಶಂಕರ್, ಅವರು ಮಾತನಾಡಿ, ತಾವು ಕಂಡಂತೆ ಕಳೆದ ಹತ್ತು ವರ್ಷಗಳಿಂದ, ತಾಲೂಕ ಕುರುಬ ನೌಕರರ ಸಂಘವು, ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ರಮದ ಮೂಲಕ  ಸಮುದಾಯದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ ಎಂದು ಸಂಘಟನೆಯ ಕಾರ್ಯವನ್ನು ಅಭಿನಂದಿಸಿದರು. ಶೈಕ್ಷಣಿಕ ಸಾಧನೆಯಿಂದ ಸಮಾಜದ ಪ್ರಗತಿ ವಿಷಯ ಕುರಿತು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಂಶುಪಾಲಡಾ : ಬಸವರಾಜ ಚಾಕಲಬ್ಬಿ ಅವರು ಉಪನ್ಯಾಸ ನೀಡಿದರು. ಅಬಕಾರಿ ನೀರೀಕ್ಷಕ, ಮಲ್ಲೇಶ್ ಭಾನುವಳ್ಳಿ, ಡಯಟ್ ಉಪನ್ಯಾಸಕ  ಎಸ್ ಜಿ ಕೋಟಿ, ಖ್ಯಾತ ಮಕ್ಕಳ ತಜ್ಞ  ಡಾ: ಪ್ರವೀಣ್ ಖನ್ನೂರ್, ಡಾ ಚಂದ್ರಶೇಖರ ನುಗ್ಗಲಿ, ಸಹಾಯಕ ವಾ. ಇ. ಆಯುಕ್ತ ಚಿದಾನಂದ ಬೆಲ್ಲಾಳ ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದ ಸಮಾಜದ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ವಿತ್ತು ಮತ್ತು ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷ ಗುಡ್ಡಪ್ಪ ತಹಸೀಲ್ದಾರ್, ತಾಲೂಕ ಕ. ನೌ. ಸಂ. ಅಧ್ಯಕ್ಷ ಕೆ. ವೈ. ಫಿಡ್ಡಿ, ಕಾರ್ಯದರ್ಶಿ ಶುಭಾಶ ಕುರುಬರ, ಖಜಾಂಚಿ ಎಚ್‌. ಎನ್‌.ಮಿಳ್ಳಿ,ಎಲ್‌. ಟಿ.ಮಿನ ಕಪ್ಪಳವರ, ಕೆ ಎಲ್ ಚಿನ್ನಿಕಟ್ಟಿ, ಮಾಲತೇಶ ಸೋಮಣ್ಣನವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ರಜನಿ ಕರಿಗಾರ್ ಪ್ರಾರ್ಥಿಸಿದರು. ಫಕ್ಕೀರೇಶ ಸುಬ್ಬರ್ ರೈತ ಗೀತೆ ಹಾಡಿದರು. ಎಂ.ಎಸ್ ಸೋಮಣ್ಣನವರ ಸ್ವಾಗತಿಸಿದರು.ಎಂ ಡಿ ದ್ಯಾಮಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಕೊಟ್ಟದ್ ವರದಿ ವಾಚಿಸಿದರು. ಪ್ರೊ : ಗುಡ್ಡಪ್ಪ ಮಾಳ ಗುಂಡಪ್ಪನವರ ನಿರೂಪಿಸಿದರು. ಎನ್‌..ಎನ್‌. ಅಣ್ಣೀರ್ ವಂದಿಸಿದರು. 


ಸುದ್ದಿ ಓದಿ