ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 20: ದಿ. ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರ ವ್ಯಕ್ತಿತ್ವವನ್ನು ನಾವು ಅಳವಡಿಸಿಕೊಂಡಾಗ ಮಕ್ಕಳ ದಿನಾಚರಣೆಗೆ ವಿಶೇಷ ಮೆರುಗು ಬರುತ್ತದೆ ಎಂದು ಅಧ್ಯಕ್ಷತೆವಹಿಸಿದ ವಿದ್ಯಾರ್ಥಿ ಶಶಾಂಕ ಹೇಳಿದನು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜವಾಹರಲಾಲ ನೆಹರುರವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿ ಮಕ್ಕಳ ಅಭಿವೃದ್ದಿಗೋಸ್ಕರ ಹಾಗೂ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಬೇಕು ಹಾಗೂ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದ ದೀಮಂತ ಪ್ರಧಾನಿ ಚಾಚಾ ನೆಹರೂಜೀವರು ಎಂದನು.
ವಿಧ್ಯಾರ್ಥಿ ಶರತ್ ಮಾತನಾಡಿ ದೇಶದಲ್ಲಿ ಮಕ್ಕಳ ಬಗ್ಗೆ ಆಪಾರ ಗೌರವ ಹೊಂದಿದ ಏಕೈಕ ವ್ಯಕ್ತಿ ಅಲ್ಲದೇ ಮಕ್ಕಳು ದೇವರ ಸಮಾನ ಹಾಗೂ ಅವರ ಮಕ್ಕಳ ಮುಗ್ದತೆ ಸ್ವಬಾವವನ್ನು ಬಹಳ ಚೆನ್ನಾಗಿ ಅರಿತಿದ್ದರು ಎಂದನು.
ವಿಧ್ಯಾರ್ಥಿ ಸುಪ್ರೀತ್ ಮಾತನಾಡಿ ಮಕ್ಕಳಲ್ಲಿ ವಿವಿದ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಕಂಡು ಹಿಡಿದು, ಪ್ರೋತ್ಸಾಹಿಸಿ ಹೊರತರುವಂತ ಕೆಲಸ ಶಿಕ್ಷಕರು ಹಾಗೂ ಪಾಲಕರಿಂದಾಗಬೇಕಿದೆ ಅವಾಗ ಮಕ್ಕಳ ದಿನಾಚರಣೆಗೆ ಮಹತ್ವ ಬರುತ್ತದೆ ಎಂದನು.
ವಿಧ್ಯಾರ್ಥಿನಿ ವಿಧ್ಯಾ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮಕ್ಕಳ ಬಗ್ಗೆ ವಿಶೇಷ ಆದ್ಯತೆಯನ್ನು ಮಕ್ಕಳಿಗೆ ಕೊಡಬೇಕು ಎಂದು ಭಾಷಣ ಮಾಡಿ ಮಕ್ಕಳ ಬಗ್ಗೆ ಇರುವ ಪ್ರೀತಿ ವಾತ್ಸಲ್ಯವನ್ನು ಜಗತ್ತಿಗೆ ಪರಿಚಿಯಿಸಿದ ಮಹಾನ ವ್ಯಕ್ತಿ ಎಂದನು.
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳಾದ ವೈಷ್ಣವಿ ಸಂಗಡಿಗರು, ನಿರಂಜನ ಸಂಗಡಿಗರು, ಸ್ಪೂರ್ತಿ ಸಂಗಡಿಗರಿಂದ ನೃತ್ಯ ನೇರವೇರಿದವು, ಕವನಾ, ವಿಜೇತ ಸಂಗಡಿಗರು, ಜೀವನಾ, ಶ್ರೇಯಾ, ಅಭಿಜ್ಞಾ ಸುಮಧುರವಾಗಿ ಗೀತಗಾಯನ ಮಾಡಿದರು.
ಭಾಕ್ಸ ಸುದ್ದಿ : ತಾಲೂಕಿನಲ್ಲಿಯೇ ಯಾರು ಮಾಡದೇ ಇರುವ ವಿಶೇಷ ಮಕ್ಕಳ ದಿನಾಚರಣೆಯನ್ನು ಚನ್ನಪ್ಪ ಕುನ್ನೂರ ಆಂಗ್ಲ ಮಾದ್ಯಮ ಶಾಲೆ ಮಕ್ಕಳಿಂದ ಮಕ್ಕಳಿಗಾಗಿಯೇ ವಿಶೇಷ ವೇದಿಕೆ ನಿರ್ಮಾಣವಾಗಿ ಮಕ್ಕಳೇ ಎಲ್ಲ ಕಾರ್ಯಕ್ರಮ ನಿರ್ವಹಿಸಿದ್ದು ವಿಶೇಷವಾಗಿತ್ತು. ಮಕ್ಕಳೆಲ್ಲರಿಗೂ ಪ್ರಾಚಾರ್ಯ ಶಿವು ಹಾವೇರಿ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಿದರು.
ಶಶಾಂಕ ಹತ್ತನೇಯ ವರ್ಗದ ವಿಧ್ಯಾರ್ಥಿ
ಮಕ್ಕಳಿಗಾಗಿ ಮನರಂಜನೆ, ವಿವಿಧ ಆಟೋಟಗಳು ನೆಡೆದು ಅದರಲ್ಲಿ ಜಯಿಸಿದವರಿಗೆ ಸೂಕ್ತ ಬಹುಮಾನವನ್ನು ಸಹಿತ ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಕ ವೃಂದವು ಸ್ಥಾನವನ್ನು ಅಲಂಕರಿಸಿದ್ದರು, ಮುಖ್ಯ ಅತಿಥಿಗಳಾಗಿ ಕವನಾ, ಸುಪ್ರೀತ, ಮಣಿಕಂಠ, ಶರತ್, ಮಾದೇಶ, ಜಸ್ಮೀತ್, ತೇಜಸ್ಸ್, ಅಮೃತೇಶ್ವರಿ, ಕೃತಿಕಾ, ಯಶವಂತ, ಸಮರ್ಥ, ಸೃಜನ, ಅಕ್ಷೊಭ್ಯ, ದೀಕ್ಷಾ ಸೇರಿದಂತೆ ಇತರ ಮಕ್ಕಳು ಉಪಸ್ಥಿತರಿದ್ದರು.ತ್ರಿವೇಣಿ ಪಾಟೀಲ ಸ್ವಾಗತಿಸಿದರು, ರೇಣುಕಾ ಗಾಣಿಗೇರ, ಸಾನಿಕಾ ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು, ತೇಜಸ್ವೀನಿ ವಂದಿಸಿದರು.