ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 14: ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರ 132 ನೇ ಹುಟ್ಟು ಹಬ್ಬವನ್ನು ವಿಶ್ವಾದ್ಯಾದಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ ಅದರ ಉದ್ದೇಶ ಅವರ ವ್ಯಕ್ತಿತ್ವವನ್ನು ನಾವು ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಬೇಕು ಎಂದು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಮುಖ್ಯೋಪಾದ್ಯಾಯಿನಿ ಸುಮಂಗಲಾ ದುರ್ಗದ ಹೇಳಿದರು.
ತಾಲೂಕಿನ ಶಿವಪೂರ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜವಾಹರಲಾಲ ನೆಹರುರವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿ ನಮ್ಮ ಈ ಶಾಲೆ ಎಲ್ಲ ತರಹದ ಅಭಿವೃದ್ದಿ ಹೊಂದಲು ತಾಲೂಕಿನ ಎಲ್ಲರ ಸಹಕಾರದಿಂದ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಶ್ರೇಯಸ್ಸು ತಾಲೂಕಿನ ಜನತೆಗೆ ಸಲ್ಲುತ್ತದೆ ಹಾಗೂ ಪ್ರಾರಂಭದಲ್ಲಿ ಅನೇಕ ಸಮಸ್ಯೆಗಳಿದ್ದವು ಆದರೆ ಈಂದಿಗೆ ಎಲ್ಲ ಸಮಸ್ಯೆಗಳು ಪರಿಹಾರವಾಗಿ ನಮ್ಮ ವಸತಿ ಶಾಲೆ ಮೊದಲಿಗೆ 50 ವಿಧ್ಯಾರ್ಥಿಗಳು ಇದ್ದು ಇಂದು 250 ವಿಧ್ಯಾರ್ಥಿಗಳು ವಿಧ್ಯಾರ್ಜನೆ ಮಾಡುತ್ತಿದ್ದಾರೆ ಅದು ನಮಗೆ ಇನ್ನೂ ಹೆಚ್ಚಿನ ಜವ್ದಾಬಾರಿವಹಿಸಿದೆ ಹಾಗೂ ನಮ್ಮ ವಸತಿ ಶಾಲೆಯ ಎಲ್ಲ ಸಿಬ್ಬಂದಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣಿಕರ್ತರಾಗಿದ್ದೇವೆ ಎಂದರು.
ಪ್ರಥಮ ದರ್ಜೇ ಸಹಾಯಕಿ ಯಶೋದಾ ದಾಸರ ಮಾತನಾಡಿ ಜವಾಹರಲಾಲ ನೆಹರುರವರು ಮಕ್ಕಳ ಅಭಿವೃದ್ದಿಗೋಸ್ಕರ ಹಾಗೂ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಬೇಕು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ದೇಶದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು ಅಲ್ಲದೇ ಭಾರತ ಬಿಟ್ಟು ತೊಲಗಿ ಚಳುವಳಿ ಸಂದರ್ಭದಲ್ಲಿ ಗಾಂಧೀಜಿಯವರ ಜೊತೆ ಜೈಲುವಾಸ ಅನುಭವಿಸಿದರು ಯಶಸ್ವಿಯಾಗಿ 17 ವರ್ಷ ಯಶಸ್ವಿಯಾಗಿ ಪ್ರಧಾನಿ ಹುದ್ದೆ ಅಲಂಕರಿಸಿದರು, ಅವರ ಆತ್ಮಚರಿತೆವುಳ್ಳ ಡಿಸ್ಕವರಿ ಆಫ್ ಇಂಡಿಯಾ ಕೃತಿ ಬಿಡುಗಡೆಗೋಳಿಸಿದರು ಅಲ್ಲದೇ 1951 ವಿಶ್ವಸಂಸ್ಥೆ ಆಧೇಶದ ಪ್ರಕಾರ ಮಕ್ಕಳ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.
ವಿಶೇಷ ಅತಿಥಿಗಳಾದ ತಾಲೂಕಿನ ವರದಿಗಾರರಾದ ವಿಶ್ವನಾಥ ಬಂಡಿವಡ್ಡರ, ಬಸವರಾಜ ಹಡಪದ, ಮಂಜುನಾಥ ಕಮ್ಮಾರ, ಪ್ರಧಾನ ಮಂತ್ರಿ ರೇವತಿ ಗುಂಡಣ್ಣವರ, ಅಶ್ವಿನಿ ಬಾರ್ಕಿ, ಮಂಜುಳಾ ಬಿಸ್ಟೇಪ್ಪನವರ, ಸೋನವ್ವ, ಸೋನಿಕಾ, ಕಾವ್ಯ ಗಾಜೀಗೌಡ್ರ, ಸುನೀತಾ ಕೋಲಕಾರ, ಸಿಂಚನಾ, ಸ್ನೇಹಾಂಜಲಿ, ನೇಹಾ, ತನುಜಾ, ಸಾನಿಯಾ, ಶೀಲಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಾರ್ಥನಾ ಗೀತೆ ಜ್ಯೋತಿ ಕಾಂಬಳೆ, ಸಂಗಡಿಗರು, ಸ್ವಾಗತ ಗೀತೆ ವಿಶಾಲಾ ಸವಣೂರ, ಸಂಗಡಿಗರು, ಈ ಸಂದರ್ಭದಲ್ಲಿ ಜಾನಪದ ನೃತ್ಯ, ಭರತ ನಾಟ ನೃತ್ಯ, ಕೋಲಾಟ ನೃತ್ಯ ವಿಧ್ಯಾರ್ಥಿಗಳಿಂದ ನೇರವೇರಿದವು, ಈ ಸಂದರ್ಭದಲ್ಲಿ ವಿಧ್ಯಾ ಅರಳೀಕಟ್ಟಿ, ನಾಗರಾಜ ವಡ್ಡರ, ಸುಮಾ ಚಲವಾದಿ, ಅಶ್ವೀನಿ ಅರಳೀಕಟ್ಟಿ, ಶಿಕ್ಷಕ ಪರುಶರಾಮ ಹಿರೂಲಾಲ ಸ್ವಾಗತಿಸಿದರು, ರಾಜೀವ ಮುರಗೆಣ್ಣನವರ ಕಾರ್ಯಕ್ರಮ ನಿರ್ವಹಿಸಿದರು, ಮಲ್ಲನಗೌಡ ಪಾಟೀಲ ವಂದಿಸಿದರು.