ಶಿಗ್ಗಾವ್

ಮಕ್ಕಳು ದೇವರ ಸಮಾನ: ಮಡಿವಾಳರ

ಮಕ್ಕಳು ದೇವರ ಸಮಾನ: ಮಡಿವಾಳರ

ಲೋಕದರ್ಶನ ವರದಿ 

ಶಿಗ್ಗಾವಿ 15:  ಮಕ್ಕಳು ದೇವರ ಸಮಾನ. ಅವರನ್ನು ಪ್ರೀತಿಯಿಂದ ಕಂಡಾಗ ಅವರಲ್ಲಿ ಆತ್ಮೀಯತೆಯ ಮನೋಭಾವ ಬೆಳೆಯುತ್ತದೆ ಎಂದು ಉತ್ಸವ ರಾಕ್ ಗಾರ್ಡನ್ ನಿರ್ದೇಶಕ  ಬಸವರಾಜ ಮಡಿವಾಳರ ಹೇಳಿದರು. 

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿರುವ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ಮಕ್ಕಳು ಸಹ ತಮ್ಮ ಜವಾಬ್ದಾರಿ ಅರಿತರಬೇಕು ಎಂದ ಅವರು, ಹೆತ್ತವರಿಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕರ ಬಗ್ಗ ಗೌರವ ಹೊಂದಿರಬೇಕು ಎಂದರು. 

ನೆಹರೂ ಅವರಿಗೆ ಮಕ್ಕಳೆಂದರೆ ತುಂಬ ಪ್ರೀತಿ. ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತೆ ಮಾಡಿರುವುದು ವಿಶೇಷ ಎಂದು ಮುಖ್ಯ ಶಿಕ್ಷಕ ಎಸ್‌.ಬಿ.ಪಾಟೀಲ್ ನುಡಿದರು. 

ಶಿಕ್ಷಕರಾದ ನಜೀರ್‌ಅಹ್ಮದ್,ಶ್ರುತಿ,ವಿದ್ಯಾರಾಣಿ,ನೇಹಾ,ಅಮೃತ,ಉಮಾ ಮತ್ತಿತರರು ಭಾಗವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮುರಳೀಧರ ದೇಶಪಾಂಡೆ ಸ್ವಾಗತಿಸಿದರು.ಶಿಕ್ಷಕ ಮಹೇಶ ವಂದಿಸಿದರು 


ಸುದ್ದಿ ಓದಿ