ರಾಣೆಬೆನ್ನೂರ

ರಾಣೀಬೆನ್ನೂರಲ್ಲಿ ಮಕ್ಕಳ ಹಕ್ಕುಗಳ ವ್ಯವಸ್ಥೆ ಕಾರ್ಯಾಗಾರ

ರಾಣೀಬೆನ್ನೂರಲ್ಲಿ ಮಕ್ಕಳ ಹಕ್ಕುಗಳ ವ್ಯವಸ್ಥೆ ಕಾರ್ಯಾಗಾರ

ಮಕ್ಕಳು ದೇಶದ ಆಸ್ಥಿ: ಶಿಕ್ಷಣ ವಂಚಿತರಾಗಬಾರದು - ಭಾರತಿ

ರಾಣೀಬೆನ್ನೂರ 06: ಮಕ್ಕಳು ಈ ದೇಶದ ಆಸ್ತಿ. ಕಾನೂನು ಬದ್ಧವಾಗಿ ಅವರಿಗೆ ಪ್ರಾಥಮಿಕ ಶಿಕ್ಷಣ ಒದಗಿಸುವ ಗುರುತರವಾದ ಜವಾಬ್ದಾರಿ ಸರ್ಕಾರ ಸಮಾಜ ಮತ್ತು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಮೇಲಿದೆ. ಅವರನ್ನು ಶಿಕ್ಷಣ ವಂಚಿತರನ್ನಾಗಿಸದೆ ಶಿಕ್ಷಣ ನೀಡುವುದರ ಮುಖಾಂತರ ಶಿಕ್ಷಣವಂತರನ್ನಾಗಿ ಮಾಡಿದಾಗ ಮಾತ್ರ ಈ ದೇಶ ಸಮಗ್ರವಾಗಿ ಪ್ರಗತಿ ಸಾಧಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಭಾರತಿ ಹೇಳಿದರು. 

ಅವರು ನಗರದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ದಾವಣಗೆರೆಯ ಡಾನ್ ಬಾಸ್ಕೋ ಕ್ರೀಂ ಸಂಸ್ಥೆ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಜಿಸಿದ್ದ ತಾಲೂಕಾ ಮಟ್ಟದ ಅಧಿಕಾರಿಗಳ ಸಂಘ-ಸಂಸ್ಥೆಯ ಪದಾಧಿಕಾರಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಆಯೋಗವು ಕಳೆದ 30 ವರ್ಷಗಳಿಂದ ಮಕ್ಕಳನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ ತನ್ನ ಕಾರ್ಯನಿರ್ವಹಿಸುತ್ತಲಿದೆ. ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಸಹಾಯವಾಣಿ, ಮಕ್ಕಳ ಸ್ನೇಹಿ ಪೋಲಿಸ್ ವಿಶೇಷ ಘಟಕ ಸೇರಿದಂತೆ ಮತ್ತಿತರ ಸಾಂವಿಧಾನಿಕ ಬದಲಾವಣೆಗಳನ್ನು ತರುವುದರ ಮೂಲಕ ಪ್ರಭಲವಾಗಿ ಕಾರ್ಯನಿರ್ವಹಿಸುತ್ತಲಿದೆ ಎಂದರು. 

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಶಂಕರ್ ಜಿ.ಎಸ್.ಅವರು ಮಾತನಾಡಿ ಭವಿಷ್ಯದ ದಿನಗಳಲ್ಲಿ ಈ ಯೋಜನೆಯ ಕುರಿತಂತೆ ಎಲ್ಲ ಅಧಿಕಾರಿಗಳ ಸಭೆಯನ್ನು ಆಯೋಜಿಸಿ ಉದ್ದೇಶಿತ ಯೋಜನೆಯನ್ನು ಸಾಧರಪಡಿಸಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣ ವಂಚಿತರಾಗಬಾರದು ಇದು ಎಲ್ಲ ಸರ್ಕಾರಗಳ ಮತ್ತು ಜನಪ್ರತಿನಿಧಿಗಳ ಆಶಯವಾಗಿದೆ. ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಈ ಕುರಿತು ಕ್ರಿಯಾ ಯೋಜನೆ ರೂಪಿಸಲು ಮುಂದಾಗುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಜಯಶ್ರೀ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಸೀಮಿಕೇರಿ, ಸಮಾಜ ಕಲ್ಯಾಣ ಇಲಾಖೆಯ ಎನ್.ಎನ್.ಭೋಸ್ಲೆ, ಕೃಷಿ ಸಹಾಯಕ ಎಚ್.ಪಿ.ಗೌಡಪ್ಪಳವರ, ತಾ.ಪಂ.ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಕ್ರೀಂ ಯೋಜನೆಯ ಸ್ವಾಮಿ ಜಿ., ನಾಗರಾಜ ಟಿ., ಕೃಷ್ಣಾ, ಪೂರ್ಣಿಮಾ, ಸೇರಿದಂತೆ ಮತ್ತಿತರ ಗಣ್ಯರು ಇಲಾಖೆಯ ಸಿಬ್ಬಂಧಿ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. 

ಶ್ರೀನಿವಾಸ ಪ್ರಾರ್ಥಿಸಿದರು ಎ.ಟಿ.ವಸಂತಕುಮಾರ ಸ್ವಾಗತಿಸಿದರು ಯೋಜನೆ ರಾಜ್ಯ ಸಂಯೋಜಕ ಬಿ.ಮಂಜಪ್ಪ ಅವರು ಕ್ರೀಂ ಯೋಜನೆಯ ಉದ್ದೇಶ ಕುರಿತಂತೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕೊನೆಗೆ ಹರ್ಷದಅಲಿ ವಂದಿಸಿದರು.     

ಸುದ್ದಿ ಓದಿ