ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ
ಇಂಡಿ 02: ನಿಮ್ಮೂರಿನ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತರಬೇತಿ ಆರಂಭಿಸಲು ಅನುಮತಿ ನೀಡಲಾಗಿದ್ದು ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡದೆ ಸರಕಾರಿ ಶಾಲೆಯಲ್ಲಿಯೇ ಮಕ್ಕಳನ್ನು ದಾಖಲು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಅವರು ಶುಕ್ರವಾರ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಹಮ್ಮಿಕೋಂಡ ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಿಮ್ಮೂರಿನ ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃಧ್ಧಿಗಾಗಿ ಗ್ರಾಮಸ್ಥರು ಕೈಜೋಡಿಸಬೇಕು. ಸರಕಾರಿ ಶಾಲೆಗಳಲ್ಲಿಯೂ ಸಹ ಶಿಕ್ಷಕರು ಉತ್ತಮವಾಗಿ ಪಾಠ ಭೋದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಯಲಗೊಂಡ ಪೂಜಾರಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳೂ ಸಹ ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬ ಸದಾಶಯದಿಂದ ಸರಕಾರ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಿದೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಪಟ್ಟಣದ ಶಾಲೆಗೆ ಕಳಿಸದೆ, ನಮ್ಮ ಗ್ರಾಮದಲ್ಲಿಯ ಶಾಲೆಗೆ ದಾಖಲಿಸಿ ಸರಕಾರಿ ಶಾಲೆಯ ಅಭಿವೃಧ್ಧಿಗಾಗಿ ಸಹಕರಿಸಬೇಕೆಂದರು.
ಎ.ಜಿ. ಚೌಧರಿ, ಯಲಗೊಂಡ ಪೂಜಾರಿ, ಭೀಮರಾಯ ಪಾರೆ, ಹಣಮಂತ ಬಿರಾದಾರ, ಮಲ್ಲು ದಶವಂತ, ಸುಧಾಕರ ಬನಸೋಡೆ, ತುಕಾರಾಮ ದಶವಂತ, ಸುನಂದಾ ದಶವಂತ, ಮಹಾದೇವಿ ಹೆಗಡ್ಯಾಳ, ವಿದ್ಯಾ ಪಾರೆ, ಬಸವರಾಜ ಬಿರಾದಾರ, ರಾಜು ಲವಗಿ, ಸಾತಪ್ಪ ದಶವಂತ ಸೇರಿದಂತೆ ಮತ್ತಿತರರು ಇದ್ದರು.
ಫೋಟೊ ಕ್ಯಾಪ್ಸನ್ 03 ಇಂಡಿ 03: ಶುಕ್ರವಾರ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಹಮ್ಮಿಕೋಂಡ ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯ ಯಲಗೊಂಡ ಪೂಜಾರಿ ಮಾತನಾಡಿದರು.