ವಾರಾಣಾಸಿಯ ಜಗತ್ಪ್ರಸಿದ್ಧ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪ್ರಧಾನಿಮಂತ್ರಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಲೋಕದರ್ಶನ ವರದಿ
ಶಿಗ್ಗಾವಿ : ವಾರಾಣಾಸಿಯಲ್ಲಿ ನಿನ್ನೆ ಸಂಜೆ ಕಾಶೀ ವಿಶ್ವನಾಥ ಆವರಣದಲ್ಲಿರುವ ರವಿದಾಸ ಘಾಟನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದೀಜೀ ಜೊತೆಗೆ 12 ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಧರ್ಮಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆಯಿತು ಅಲ್ಲದೇ ಐತಿಹಾಸಿಕ ಪುಟಕ್ಕೆ ಸಾಕ್ಷಿಯಾಯಿತು.