ಇಂಡಿ

ಲಾಳಸಂಗಿ ಗ್ರಾಪಂ ಅಧ್ಯಕ್ಷರಾಗಿ ಛಾಯಾ ಶಿವಪೂರ ಅವಿರೋಧ ಆಯ್ಕೆ: ಸಂಭ್ರಮಾಚರಣೆ

ಲಾಳಸಂಗಿ ಗ್ರಾಪಂ ಅಧ್ಯಕ್ಷರಾಗಿ ಛಾಯಾ ಶಿವಪೂರ ಅವಿರೋಧ ಆಯ್ಕೆ: ಸಂಭ್ರಮಾಚರಣೆ

ಲೋಕದರ್ಶನ ವರದಿ 

ಇಂಡಿ 31: ತಾಲೂಕಿನ ಲಾಳಸಂಗಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಛಾಯಾ ಪ್ರವೀಣ ಶಿವಪೂರ ಶನಿವಾರರಂದು ಅವಿರೋಧ ಆಯ್ಕೆಯಾದರು. 

ಇತ್ತೀಚೆಗೆ ಗ್ರಾಪಂನ 10 ಸದಸ್ಯರು ಅಧ್ಯಕ್ಷೆ ಸುನಿತಾ ಶೆಟ್ಟೆಪ್ಪ ಹರಿಜನ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ ಪ್ರಯುಕ್ತ ನೂತನ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. 

ಛಾಯಾ ಪ್ರವೀಣ ಶಿವಪೂರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಯಿತೆಂದು ಚುನಾವಣಾಧಿಕಾರಿ ಸುನೀಲ್ ಮದ್ದಿನ್ ಘೋಷಿಸಿದರು. 

ಉಪಾಧ್ಯಕ್ಷೆ ಶ್ವೇತಾ ಪ್ರಭುಲಿಂಗ ಬಬಲೇಶ್ವರ, ಸದಸ್ಯರುಗಳಾದ ಯಲ್ಲಪ್ಪ ಗಜಾಕೋಶ, ಪುಂಡಲೀಕ ನಾವಿ, ಆರತಿ ಸಿದ್ದಪ್ಪ ಗೂಗಿಹಾಳ, ನಿರ್ಮಲಾ ಹದರಿ, ರಾಜಶೇಖರ ಮಾಳಾ, ಮಲ್ಲವ್ವ ಕುಂಬಾರಿ, ಸಾಹೇಬಗೌಡ ಬಂಡಿ, ಭೌರಮ್ಮ ಬಂಕಲಗಿ ಹಾಜರಿದ್ದರು. 

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರಾವತಿ ಪೂಜಾರಿ, ಕಾರ್ಯದರ್ಶಿ ಸಂಪತ್‌ಕುಮಾರ ಬಿರಾದಾರ, ಮಾದೇವ ಸೊನ್ನ, ತುಕಾರಾಮ ಮಾರನೂರ ಇದ್ದರು. 

ವಿಜಯೋತ್ಸವ: ಛಾಯಾ ಪ್ರವೀಣ ಶಿವಪೂರ ಅವರ ಆಯ್ಕೆ ಅವಿರೋಧವಾಗುತ್ತಿದ್ದಂತೆ ಗ್ರಾಮದ ಹಲವು ಗಣ್ಯರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರ್ರಮಿಸಿದರು. 

ಸಂಭ್ರಮಾಚರಣೆಯಲ್ಲಿ ಪ್ರಭು ಬಬಲೇಶ್ವರ, ಪ್ರಶಾಂತ ಅಲಗೊಂಡ, ಪ್ರಕಾಶ ಶಿವಪೂರ, ಸುಬ್ಬುಗೌಡ ಬಿರಾದಾರ, ಸಿದ್ರಾಮಗೌಡ ಬಿರಾದಾರ, ಸಿದ್ದಾರ್ಥ ಮೈದರಗಿ, ರಾಮಗೌಡ ಬಿರಾದಾರ, ರಾವುತಪ್ಪ ಆಸಿಂಗನಾಳ, ನಿಂಬಣ್ಣ ಹಿರೇಕುರುಬರ, ದಶರಥ ಗೂಗಿಹಾಳ, ಮತ್ತಿತರರು ಇದ್ದರು. 


ಸುದ್ದಿ ಓದಿ