ಇಂದು ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಜಯಂತ್ಯೋತ್ಸವ
ತಾಳಿಕೋಟೆ18: ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ದಿ ಸಂಘ, ಕ್ಷತ್ರೀಯ ಮರಾಠ ಸಮಾಜ, ಛತ್ರಪತಿ ವೀರಶಿವಾಜಿ ಸೇನೆ, ಜೀಜಾಮಾತಾ ಮಹಿಳಾ ಮಂಡಳದ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವವನ್ನು ಇಂದು ದಿ. 19 ಶನಿವಾರರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ ಅವರು ಹೇಳಿದರು.
ಶುಕ್ರವಾರರಂದು ಶ್ರೀ ಶಿವಭವಾನಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬೆಳಿಗ್ಗೆ 6 ಗಂಟೆಗೆ ಕ್ಷತ್ರೀಯ ಮರಾಠ ಸಮಾಜದ ಶ್ರೀ ಶಿವಭವಾನಿ ಮಂದಿರದಲ್ಲಿ ಶ್ರೀದೇವಿಯ ಮಹಾ ಮೂರ್ತಿಗೆ ಹಾಗೂ ಶಿವಾಜಿ ಮಹಾರಾಜರ ಮಹಾ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರಿಂದ ನೇರವೇರಲಿದೆ. ಮದ್ಯಾಹ್ನ 12 ಗಂಟೆಗೆ ಪಟ್ಟಣದ ಮಹಾರಾಣಾಪ್ರತಾಪ ಸಿಂಹ ವೃತ್ತದಿಂದ ವಿವಿಧ ವಾಧ್ಯ ವೈಭವಗಳೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯ ಶೋಭಾಯಾತ್ರೆಯು ಪ್ರಾರಂಭಗೊಂಡು ಶಿವಾಜಿ ಮಹಾರಾಜರ ವೃತ್ತದಲ್ಲಿ ಮಹಾಪೂಜಾ ಕಾರ್ಯಕ್ರಮ ನೇರವೇರಿಸಲಾಗುವದು ನಂತರ ಶೋಭಾ ಯಾತ್ರೆಯು ವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ರಾಜವಾಡೆಯಲ್ಲಿರುವ ಶ್ರೀ ಶಿವಭವಾನಿ ಮಂದಿರದ ಮುಖ್ಯ ವೇದಿಕೆಗೆ ಆಗಮಿಸಲಿದೆ. ನಂತರ ಶಿವಾಜಿ ಮಹಾರಾಜರ ತೋಟ್ಟಿಲು ಕಾರ್ಯಕ್ರಮದೊಂದಿಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಪಟ್ಟಾಧೀಶರಾದ ಶ್ರೀ ಸಿದ್ದಲಿಂಗ ದೇವರು, ಕೆಸರಟ್ಟಿಯ ಶ್ರೀ ಶಂಕರಲಿಂಗ ಗುರು ಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ವಹಿಸುವರು. ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು ಮರಾಠ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಮುಖ್ಯ ಅತಿಥಿಗಳಾಗಿ ತಹಶಿಲ್ದಾರ ಅನೀಲಕುಮಾರ ಢವಳಗಿ, ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ ಅವರು ಆಗಮಿಸಲಿದ್ದಾರೆ, ಮುಖ್ಯ ವಕ್ತಾರರಾಗಿ ಸಾಹಿತಿ ಶಿಕ್ಷಕರಾದ ಅಶೋಕ ಹಂಚಲಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ವಿವರಿಸಲಿದ್ದಾರೆಂದ ಅವರು ಮೇರವಣಿಗೆಯಲ್ಲಿ ಕುದುರೆಯ ಮೇಲೆ ಶಿವಾಜಿ ಮಹಾರಾಜರ ವೇಷದಾರಿ ಪಾಲ್ಗೊಳ್ಳಲಿದ್ದು ಇದರಿಂದ ಶೋಭಾ ಯಾತ್ರೆಗೆ ಇನ್ನಷ್ಟು ಮೆರಗು ತಂದುಕೊಡಲಿದೆ ಕಾರಣ ಹಿಂದೂಪರ ಸಂಘಟಿಕರು, ವಿವಿಧ ಸಮಾಜದ ಬಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು.
ಕ್ಷತ್ರೀಯ ಮರಾಠ ಸಮಾಜದ ಉಪಾಧ್ಯಕ್ಷ ಅಣ್ಣಾಜಿ ಜಗತಾಪ, ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ದಿ ಸಂಘದ ಅಧ್ಯಕ್ಷ ವಿಠ್ಠಲ ಮೋಹಿತೆ, ಉಪಾಧ್ಯಕ್ಷ ಸಂತೋಷ ಡಿಸಲೆ, ಸಮಾಜದ ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಶಶಿಧರ ಡಿಸಲೆ, ನಾರಾಯಣ ಘಾಯಕವಾಡ, ರಾಮು ಜಗತಾಪ, ವಿಷ್ಣು ಸಾಳುಂಕೆ, ರಾಘವೇಂದ್ರ ಮಾನೆ, ಅಂಬಾಜಿ ಘೋರೆ್ಡ, ರಮೇಶ ಮೋಹಿತೆ, ನಾಗರಾಜ ಪತ್ತಾರ, ಅನೀಲ ಮಾನೆ, ಸಂತೋಷ ಸುಭೇದಾರ, ಪಾಂಡು ಕದಂ, ಮೊದಲಾದವರು ಉಪಸ್ಥಿತರಿದ್ದರು.