ಅಥಣಿ

ಸಂಸ್ಥೆಯ ಶಿಕ್ಷಕನೋರ್ವನ ಮೇಲೆ ಚೇರಮನ್ ಹೊನಕಡಬಿ ಹಲ್ಲೆ

ಸಂಸ್ಥೆಯ ಶಿಕ್ಷಕನೋರ್ವನ ಮೇಲೆ ಚೇರಮನ್ ಹೊನಕಡಬಿ ಹಲ್ಲೆ
ಬಸವೇಶ್ವರ ಶಿಕ್ಷಣ ಸಂಸ್ಥೆಯನ್ನು ಸುಪರ್ ಸೀಡ್ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತ

ಬಸವೇಶ್ವರ ಶಿಕ್ಷಣ ಸಂಸ್ಥೆ ಸುಪರ್ ಸೀಡ್‌ಗೆ ಆಗ್ರಹಿಸಿ ಕರವೇ ಪ್ರತಿಭಟನೆ 

ಅಥಣಿ 26: ತಾಲೂಕಿನ ಸತ್ತಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕನೋರ್ವನ ಮೇಲೆ ಸಂಸ್ಥೆಯ ಚೇರಮನ್ ಮಾರುತಿ ಹೊನಕಡಬಿ ಹಲ್ಲೆ ನಡೆಸಿದ್ದು, ಸಂಸ್ಥೆಯನ್ನು ಸೂಪರ್ ಸೀಡ್ ಮಾಡಿ ಅಧ್ಯಕ್ಷರನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸನಗೌಡಾ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಅವರು ಶಿಕ್ಷಕನ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡುತ್ತಿದ್ದರು.  

ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮಣ ಹಣಮಂತ ನಾಯಿಕ ಇವರನ್ನು ಸಂಸ್ಥೆಯ ಅಧ್ಯಕ್ಷ ವಿನಾಕಾರಣ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಶಿಕ್ಷಕ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಅವರು ಕಳೆದ ಅನೇಕ ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷ ಹೊನಕಡಬಿಯವರು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಂದ ಅಕ್ರಮವಾಗಿ ತಿಂಗಳಿಗೆ 5 ಸಾವಿರ ಹಣವನ್ನು ಪಡೆಯುತ್ತಿದ್ದಾರೆ ಒಂದು ವೇಳೆ ಹಣ ಕೊಡಲು ನಿರಾಕರಿಸಿದಲ್ಲಿ ಮಹಿಳೆ, ಪುರುಷ ಎನ್ನದೆ ಎಲ್ಲರನ್ನೂ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆಗೂ ಕೂಡ ಮುಂದಾಗುತ್ತಾರೆ ಇಂತಹ ಅಧ್ಯಕ್ಷರ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಿ ಬಂಧನ ಮಾಡಲು ಪೊಲೀಸ್ ಠಾಣೆಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.  

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಂದೇಶ್ವರ ಗ್ರಾಮ ಪಂಚಾಯತ ಸದಸ್ಯ ಶ್ರೀಧರ ಭೋಜನ್ನವರ ಮಾತನಾಡಿ, ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕರ ಮೇಲೆ ನಿರಂತರವಾಗಿ ಅನ್ಯಾಯ ನಡೆಯುತ್ತಿದೆ. ಹಣಮಂತ ಹೊನಕಡಬಿ ಇದೇ ಮೊದಲ ಬಾರಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿಲ್ಲ ಅನೇಕ ಬಾರಿ ಹಲ್ಲೆ ನಡೆಸಿದ್ದಾರೆ ಇಂತಹ ಅಧ್ಯಕ್ಷರ ಮೇಲೆ ತಕ್ಷಣ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.  

ಪ್ರತಿಭಟನೆಯಲ್ಲಿ ಶಬ್ಬೀರ ಸಾತಬಚ್ಚೆ, ಎಲ್‌.ಎಮ್‌.ನಾಯಿಕ, ಎಲ್‌.ಜಿ.ಸನದಿ, ಮಲಗೌಡಾ ಪಾಟೀಲ, ಈಶ್ವರ ಸನದಿ, ಸಚೀನ ಪಾಟೀಲ, ಬಿ.ಎ.ಹಿರೇಮಠ ಸೇರಿದಂತೆ ಸಂಸ್ಥೆಯ ಶಿಕ್ಷಕರು, ಸಹ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಸುದ್ದಿ ಓದಿ