ಉಚಿತ ಹೃದಯ ರೋಗ ತಪಾಸಣೆ ಶಿಬಿರ
ಗದಗ 11 : ಪ್ರೋಬಸ್ ಕ್ಲಬ್ನ ಏಳನೇ ಮಾಸಿಕ ಕಾರ್ಯಕ್ರಮ ಜ.11ರಂದು ಮು.10.30 ಗಂಟೆಗೆ ನಗರದ ಕರ್ನಾಟಕ ರಾಜ್ಯ ಜಿಲ್ಲಾ ನಿವೃತ್ತ ನೌಕರರ ಸಭಾ ಭವನ ಬಸವೇಶ್ವರ ನಗರದಲ್ಲಿ ಕಾರ್ಯಕ್ರಮ ಇದ್ದು ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ನಾರಾಯಣ ಹಾರ್ಟ ಸೆಂಟರ್ ಧಾರವಾಡ ಹಾಗೂ ಪ್ರೋಬಸ್ ಕ್ಲಬ್ ಗದಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ನ ಅಧ್ಯಕ್ಷ ಬಿ. ಎಚ್. ಗರಡಿಮನಿಯವರು ವಹಿಸಿಕೊಳ್ಳಲಿದ್ದಾರೆ. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸನ್ನರೇಣುಕಾಸ್ವಾಮಿ ಬ. ಶಾಬಾದಿಮಠ ಪುಸ್ತಕ ವ್ಯಾಪಾರಿಗಳು ಗದಗ ಇವರು ಆಗಮಿಸುವರು, ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ತೋಟಗೇರ ಕಾರ್ಯದಶರ್ಿ ಪ್ರೋಬಸ್ ಕ್ಲಬ್ ನಿರ್ವಹಿಸುವರು.
ಕಾರ್ಯಕ್ರಮದ ದಾಸೋಹ ಸೇವೆಯನ್ನು ನೂರಜಾನ ಎಸ್. ಬಳ್ಳಾರಿ, ಮಂಗಳಾ ಯಾನಮಶೆಟ್ಟಿ, ರತ್ನಾ ಗಾರ್ಘಿ , ಡಾ. ಮಲ್ಲಣ್ಣ ರಾಟಿ, ಆರ್. ಡಿ. ಕಿಲಬನವರ, ಎನ್.ಎಸ್. ಬಳಿಗಾರ, ವ್ಹಿ. ಜಿ. ಬಾರಿಕೇರ, ಚನ್ನಯ್ಯ ಟಿ. ಹಿರೇಮಠ, ಆರ್. ಡಿ. ಕಪಲಿ, ಸಿ. ಎನ್. ರುದ್ರಂಬಾ, ಎಮ್. ಆರ್. ಬಸವರಡ್ಡಿ ವಹಿಸಿಕೊಂಡಿದ್ದಾರೆ. ಕಾರಣ ಕ್ಲಬ್ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಸದರ ಕಾರ್ಯಕ್ರಮಕ್ಕೆ ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯ ಮೂಲಕ ವಿನಂತಿಸಲಾಗಿದೆ