ಚೌಹಾಣ್ ಅವಹೇಳನಕಾರಿಯಾಗಿ ಹೇಳಿಕೆ: ರಾಜೀನಾಮೆಗೆ ಒತ್ತಾಯ
ಶಿಗ್ಗಾವಿ 02 : ರಾಜ್ಯ ಬಿಜೆಪಿ ಸರಕಾರದ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಬಸವ ಕಲ್ಯಾಣದ ಪ್ರಚಾರದ ಸಭೆಯಲ್ಲಿ ಹಡಪದ (ಕ್ಷೌರಿಕ) ವೃತ್ತಿಯ ಕುರಿತು ಲೇವಡಿ ಮಾಡಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನ ಶಿಗ್ಗಾವಿ ತಾಲೂಕಿನ ಹಡಪದ (ಕ್ಷೌರಿಕ) ಸಮಾಜ ತೀರ್ವವಾಗಿ ಖಂಡಿಸಿ ಅವರ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವಂತೆ ಶಿಗ್ಗಾವಿ ಹಡಪದ ಅಪ್ಪಣ್ಣ ಸಮಾಜದ ಉಪಾದ್ಯಕ್ಷ ಮುತ್ತುರಾಜ ಕ್ಷೌರದ ಒತ್ತಾಯಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಹಡಪದ (ಕ್ಷೌರಿಕ) ಸಮಾಜದ ಅಭ್ಯರ್ಥಿಯಾದ ಈರಣ್ಣ ಹಡಪದ (ಸಣ್ಣೂರ) ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಹತಾಸೆ ಗೊಂಡಿರುವ ಅಲ್ಲಿಯ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಎಂದಾದರೆ ಬಿಜೆಪಿ ಅಭ್ಯರ್ಥಿಯೇ ಗೆಲ್ಲುತ್ತದೆ, ವಿರೋಧಿ ಅಬ್ಯರ್ಥಿ ಹತ್ತಿರ ಗೆಲ್ಲಲು ಏನಿದೆ ? ಹಡಪದ ಸಮಾಜದವರು ಶಾಸಕರಾಗಿ ಆಯ್ಕೆಯಾದರೆ ಅವರೇನು ದಾಡಿ (ಕ್ಷೌರ) ಮಾಡುತ್ತ ತಿರುಗುತ್ತಾರೆಯೇ ? ಎನ್ನುವ ಮೂಲಕ ಹಡಪದ (ಕ್ಷೌರಿಕ) ವೃತ್ತಿ ನಿರತರನ್ನು ಸಮಾಜವನ್ನ ಅವಮಾನಿಸಿದ್ದಾರೆ ಇದು ಕಾಯಕ ನಿಷ್ಠೆಯ ಕುರಿತು ಮಾತನಾಡುವ ಪ್ರಭು ಚೌಹಾಣ್ನ ಮನೋವೃತ್ತಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ತೀರ್ವ ಅಕ್ರೋಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಗ್ಗಾವಿ ಹಡಪದ ಸಮಾಜದ ಅದ್ಯಕ್ಷ ಬಸವರಾಜ ಹಡಪದ, ಖಜಾಂಚಿ ಶಿವರಾಜ ಕ್ಷೌರದ, ವಿರೇಶ ಹಡಪದ ಸೇರಿದಂತೆ ತಾಲೂಕಿನ ಹಡಪದ ಸಮಜದ ಮುಖಂಡರು ಉಪಸ್ಥಿತರಿದ್ದರು.