ಕಾರವಾರ

ಕಾರವಾರ ರೋಟರಿ ಸಂಸ್ಥೆಯಲ್ಲಿ ಚಾರ್ಟರ್ ದಿನಾಚರಣೆ

ಕಾರವಾರ ರೋಟರಿ ಸಂಸ್ಥೆಯಲ್ಲಿ ಚಾರ್ಟರ್ ದಿನಾಚರಣೆ

ಕಾರವಾರ 06:  ದಿ.04ರಂದು ರೋಟರಿ ಕ್ಲಬ್ ಕಾರವಾರ ಇದರ 61ನೇ ಚಾರ್ಟರ್ ದಿನವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.  ಈ ಚಾರ್ಟರ್ ದಿನದಂದು ರೋಟರಿ ಜಿಲ್ಲಾ ಪ್ರಾಂತಪಾಲರ ಪ್ರತಿನಿಧಿಯಾಗಿ ಕುಮಟಾದಿಂದ ರೋ. ಜಯಶ್ರಿ ಕಾಮತರವರು ಆಗಮಿಸಿದ್ದರು.  ಅಂದು ಸಂಜೆ ರೋಟರಿ ಕ್ಲಬ್ಬಿನ ಅಧ್ಯಕ್ಷರು ಹಾಗೂ ಸದಸ್ಯರುಗಳ ಜೊತೆಗೂಡಿ 1960ರಲ್ಲಿ ಸಂಸ್ಥೆಯ ಪ್ರಾರಂಭದಲ್ಲಿ ಸಂಸ್ಥಾಪಕ ಸದಸ್ಯರಾಗಿ ಈಗ ವಿಶ್ರಾಂತ ಜೀವನದಲ್ಲಿರುವ ರೋ. ರಾಮದಾಸ  ಹಳದಿಪೂರ ರವರನ್ನು  ಅವರ ಸ್ವಗೃಹದಲ್ಲಿ ಭೇಟಿ ನೀಡಿ ಅವರನ್ನು ಆತ್ಮೀಯವಾಗಿ ಗೌರವಿಸಿ, ಅವರ ಕುಶಲೋಪಚಾರವನ್ನು ವಿಚಾರಿಸಿ, ಅವರನ್ನು ಸನ್ಮಾನಿಸಲಾಯಿ. 

ಸಾಯಂಕಾಲ 8 ಘಂಟೆಗೆ ರೋಟರಿ ಶತಾಬ್ದಿ ಭವನದಲ್ಲಿ ಚಾರ್ಟರ್ ದಿನಾಚರಣೆಯ ಕಾರ್ಯ ಕ್ರಮದಲ್ಲಿ ಅಧ್ಯಕ್ಷರಾದ ರೋ. ಸುನೀಲ ಸೋನಿ ರವರು ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತ ದೇಶದಲ್ಲಿ ಕೋವಿಡ್-19 ಮಹಾಮಾರಿ ಸಮಯದಲ್ಲಯೂ ನಮ್ಮ ರೋಟರಿ ಸಂಸ್ಥೆಯು ಸಾಮಾಜಿಕ ಕಾರ್ಯವನ್ನು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳುತ್ತ ಕಳೆದ 61 ವರ್ಷಗಳಿಂದ  ರೋಟರಿ ಸಂಸ್ಥೆಯಲ್ಲಿ ಈ ಪೂರ್ವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧ್ಯಕ್ಷರನ್ನು ಸ್ಮರಿಸಿ ಹಾಜರಿದ್ದ ಪೂರ್ವ ಅಧ್ಯಕ್ಷರುಗಳನ್ನು ಆತ್ಮೀಯವಾಗಿ ಗೌರವಿಸಿದರು.  ಕಾರವಾರ ರೋಟರಿ ಸಂಸ್ಥೆಗೆ ಹೊಸ ಸದಸ್ಯರನ್ನಾಗಿ ಉದ್ಯಮಿ ಪಿ.ವಿ. ಪ್ರಜೀತ ರವರನ್ನು ಸೇರಿಸಿಕೊಳ್ಳಲಾಯಿತು.

ಜಿಲ್ಲಾ ಉಪ ಪ್ರಾಂತಪಾಲರಾದ ಅವರ್ಸಾದ ರೋ. ವಿನಾಯಕ ಕಾಮತರವರು ಕಾರವಾರ ರೋಟರಿ ಸಂಸ್ಥೆಯನ್ನು ಪ್ರಾರಂಭಿಸಿದ ಡಿ.ವಿ.ಚಿತ್ತಾಲ, ಡಾ. ಸೂರ್ಯವಂಶಿ, ಜಿ.ಕೆ. ಹಳದಿಪೂರ ಅನೇಕರನ್ನು ಸ್ಮರಿಸುತ್ತ  ಇಂತಹ ಮಹಾನುಭಾವರು ಅಧ್ಯಕ್ಷರಾಗಿ ಮೆರೆದಿರುವ ಈ ಕ್ಲಬ್ಬಿಗೆ ನಾನು ಉಪಪ್ರಾಂತಪಾಲನಾಗಿರುವುದು ನನ್ನ ಸೌಭ್ಯಾಗ್ಯವೆನ್ನುತ್ತ ಎಲ್ಲಾ ಪೂರ್ವ ಅಧ್ಯಕ್ಷರನ್ನು ಅಭಿನಂದಿಸಿದರು.  ಜಿಲ್ಲಾ ಪಾಂತಪಾಲರ ಪ್ರತಿನಿಧಿಯಾಗಿ ರೋ. ಜಯಶ್ರಿ ಕಾಮತ ರವರು ಮಾತನಾಡುತ್ತ ಕಾರವಾರ ರೋಟರಿ ಸಂಸ್ಥೆಯು 61 ವರ್ಷಗಳ ಸೂಧೀರ್ಘ ಸೇವೆನ್ನು ಸಮಾಜಕ್ಕೆ ವಿವಿಧ ರೂಪದಲ್ಲಿ ನೀಡುತ್ತಾ ಬಂದಿದೆ. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕೃತಕ ಕೈಕಾಲು ಜೋಡಣೆ, ಕುಡಿಯುವ ನೀರಿನ ವ್ಯವಸ್ಥೆ, ಅನ್ನಸೇವಾ ಸಂಕಲ್ಪ ಹೇಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದೆ.  ಇನ್ನೂ ನೂರಾರು ವರ್ಷಗಳ ಅವರ ಸೆವೆ ನಿರಂತರಾಗಿರಲಿ ಎಂದು ಹಾರೈಸಿದರು.  

ಈ ಸಂದರ್ಭದಲ್ಲಿ ನ್ಯೂ ಹೈಸ್ಕೂಲ್ ಕಿನ್ನರಿನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ  “ರೋಟರಿ ಅನ್ನಸೇವಾ ಸಂಕಲ್ಪ” ದಡಿಯಲ್ಲಿ ಊಟದ ವ್ಯವಸ್ಥೆಗಾಗಿ ಅಕಿ, ಬೇಳೆ, ಬೆಲ್ಲ ಹಾಗು ಇತರ ದವಸ ಧಾನ್ಯಗಳನ್ನು ನೀಡಲಾಯಿತು. ಇದನ್ನು ನಿಕಟಪೂರ್ವ ಅಧ್ಯಕ್ಷ ರೋ. ನಾಗರಾಜ ಜೋಶಿ ಪ್ರಾಯೋಜಿಸಿದ್ದರು.   

ವೇದಿಕೆಯ ಮೇಲೆ ರೋಟರಿ ಚಾರಿಟೆಬಲ್ ಟ್ರಸ್ಟ್ ಚೇರಮನ್ ರೋ. ಮನೋಹರ ಕಾಂಬ್ಳಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ನೂತನ ಸೋನಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ  ರೋಟರಿಯ ಎಲ್ಲಾ ಸದಸ್ಯರು, ಅವರ ಕುಟುಂಬ ವರ್ಗದವರು, ಇನ್ನರ್‍ವ್ಹೀಲ್ ಸದಸ್ಯರು, ರೋಟರ‍್ಯಾಕ್ಟ್ ಸದಸ್ಯರು, ಅತಿಥಿಗಳು, ಅವ್ಹಾನಿತರು ಹಾಜರಿದ್ದು ಭೋಜನ ಕೂಟದಲ್ಲಿ ಭಾಗವಹಿಸಿದರು.  ರೋ. ಶೈಲೇಶ ಹಳದಿಪೂರ ಹಾಗೂ ರೋ. ಯೊಗೇಶ ಭಂಡಾರಕರ ರವರು ಕಾರ್ಯಕ್ರವನ್ನು ನಿರೂಪಿಸಿದರು. ಕೊನೇಯಲ್ಲಿ ಕ್ಲಬ್ಬಿನ ಕಾರ್ಯದರ್ಶಿಯಾದ ರೋ. ಗಣಪತಿ ಬಾಡಕರ ವಂದನಾರ್ಪಣೆ ಸಲ್ಲಿಸಿದರು.

ಸುದ್ದಿ ಓದಿ