ವಿಜೃಂಭಣೆಯಿಂದ ಹೊಳಗುಂದಿ ಸಿದ್ದೇಶ್ವರ ಸ್ವಾಮಿಯ ರಥೋತ್ಸವ
ಹೂವಿನಹಡಗಲಿ 06: ತಾಲೂಕಿನ ಹೊಳಗುಂದಿ ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ 5.30ಕ್ಕೆ ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಿಂದ ಪುಷ್ಪಾಲಂಕೃತ ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿ ಮೂರು ಸುತ್ತು ಪ್ರದಕ್ಷಣಿ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥಕ್ಕೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ಸ್ವಾಮಿಯ ನಿಶಾನೆ ನಂತರ ಜಯಘೋಷ ಹಷ್ಗೋದ್ಘಾರದ ನಡುವೆ ರಥವನ್ನು ಭಕ್ತರು ಎಳೆಯಲಾಯಿತು.
ಬೃಹತ್ ಹೂಮಾಲೆ,ತಳಿರು ತೋರಣಗಳಿಂದ ಸಿಂಗರಿಸಿದ್ದ ರಥವು ವೈಭವದಿಂದ ಸಾಗಿ ಬರುತ್ತಿದ್ದಂತೆ ರಥ ಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥೋತ್ಸವ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥಕ್ಕೆ ತೆಂಗಿನ ಕಾಯಿ,ಉತ್ತತ್ತಿ ಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಿಸಿದರು. 50 ನಂದಿಕೋಲು,ಸಮಾಳ,ಮಂಗಳ ವಾಧ್ಯಗಳ ವೈಭವ ರಥೋತ್ಸವಕ್ಕೆ ಮೆರುಗು ತಂದಿತು.ರಥವು ಪಾದಗಟ್ಟಿ ತಲುಪಿ. ಮೂಲ ಸ್ಥಳಕ್ಕೆ ಹಿಂದಿರುಗುತ್ತಿದ್ದಂತೆ ಭಕ್ತರು ಚಪ್ಪಳೆ ತಟ್ಟಿ ಹರ್ಷದಿಂದ ಸಂಭ್ರಮಿಸಿದರು.
ದೇವಸ್ಥಾನದಲ್ಲಿ ಸ್ವಾಮಿಗೆ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸಿದರು. ಹೂವಿನಹಡಗಲಿ,ನಂದಿಹಳ್ಳಿ,ಉತ್ತಂಗಿ,ಇಟ್ಟಿಗಿ,ಹಗರಿಬೊಮ್ಮನಹಳ್ಳಿ ಸುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮೀಯ ಆರ್ಶೀವಾದ ಪಡೆದರು. ಶನಿವಾರ ಬೆಳಿಗ್ಗೆ 11.30ಕ್ಕೆ ಅಗ್ನಿ ಕಾರ್ಯಕ್ರಮ ಜರುಗಲಿದೆ.