ಕಾರವಾರ

ಚಂದ್ರು ಲಮಾಣಿ ಮಾಡಿದ್ದು ಅಕ್ಷಮ್ಯ ತಪ್ಪು ; - ಬಿಜೆಪಿ ಶಾಸಕ ದಿನಕರ ಶೆಟ್ಟಿಕುಮಟಾದ ಅಘನಾಶಿನಿ ಸೇತುವೆ ಕಾಮಗಾರಿ ಪ್ರಗತಿ ಪರೀಶೀಲನೆ

ಚಂದ್ರು ಲಮಾಣಿ ಮಾಡಿದ್ದು ಅಕ್ಷಮ್ಯ ತಪ್ಪು ;  - ಬಿಜೆಪಿ ಶಾಸಕ ದಿನಕರ ಶೆಟ್ಟಿಕುಮಟಾದ ಅಘನಾಶಿನಿ ಸೇತುವೆ ಕಾಮಗಾರಿ ಪ್ರಗತಿ ಪರೀಶೀಲನೆ
Chandru Lamani made an unforgivable mistake; - BJP MLA Dinakar Shettikumata reviews progress of Agha

 ಕಾರವಾರ 23 : ಶಾಸಕ ಚಂದ್ರು ಲಮಾಣಿ  ಗುತ್ತಿಗೆದಾರನಿಂದ ಹಣ ಪಡೆದದ್ದು ಅಕ್ಷಮ್ಯ ತಪ್ಪು . ಅವರ ವಿರುದ್ಧ ಪಕ್ಷ  ಕ್ರಮಕೈಗೊಳ್ಳಲಿದೆ  ಎಂದು ಬಿಜೆಪಿ ಶಾಸಕ ದಿನಕರ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಕುಮಟಾದ ಹೆಗಡೆ ಗ್ರಾಮದಲ್ಲಿ , ಸಚಿವ ಸತೀಶ್ ಜಾರಕಿಹೊಳೀ ಜೊತೆ ಅಘನಾಶಿನಿ ಸೇತುವೆ ಕಾಮಗಾರಿ ಪ್ರಗತಿ ಪರೀಶೀಲನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ,  ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆ ಬಿದ್ದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದರು. ಚಂದ್ರು ಲಮಾಣಿ ಘಟನೆಯಿಂದ ಬಿಜೆಪಿ ಪಕ್ಷಕ್ಕೆ ತುಂಬಾ ಡ್ಯಾಮೇಜ್ ಆಗಿದೆ. ಬಿಜೆಪಿ ಇಂಥವರ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದರು. ಪಕ್ಷದಲ್ಲಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂಬ ವಿಶ್ವಾಸವನ್ನು ಶಾಸಕ ದಿನಕರ ಶೆಟ್ಟಿ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕಿತ್ತು : ಈ ಹೊತ್ತಿಗೆ  ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕಿತ್ತು. ನನಗಿರುವ  ಮಾಹಿತಿ ಪ್ರಕಾರ ಇಬ್ಬರ ನಡುವೆ 50:50 ಅವಧಿಯ  ಮಾತುಕತೆ ಆಗಿದೆ. ಪಕ್ಷದಲ್ಲಿನ ರಾಜಕೀಯ ಕಾರಣಕ್ಕೆ ಶಿವಕುಮಾರ್ ಅವರಿಗೆ  ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಗುತ್ತಿದೆ. ನಾನು ಏನಾದರೂ  ಮಾತಾಡಿದರೆ,  ಕಾಂಗ್ರೆಸ್ ನಲ್ಲಿ ಪುಡಾರಿಗಳು ಮರು  ಮಾತಾನಾಡುತ್ತಾರೆ. ಮುಖ್ಯಮಂತ್ರಿ ಏನು ಸ್ವರ್ಗದಿಂದ ಬಂದವರಲ್ಲ. ಮುಖ್ಯಮಂತ್ರಿ ಕೂಡ ನನ್ನ ತರಹ  ಶಾಸಕರು. ಈ ಹಿಂದೆ ಆರ್‌.  ಗುಂಡುರಾವ್ ಬಹಳ ಚಿಕ್ಕ  ವಯಸ್ಸಿನಲ್ಲೇ ಸಿಎಂ ಆಗಿದ್ದರು.  ರಾಜಕೀಯದಲ್ಲಿ ಯಾರೂ ಬೇಕಾದರೂ  ಸಿಎಂ ಆಗಬಹುದು. ಸಮಯ ಸಂದರ್ಭ ಬರಬೇಕು  ಅಷ್ಟೆ ಎಂದು  ಬಿಜೆಪಿ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. 


ಸುದ್ದಿ ಓದಿ