ಯರಗಟ್ಟಿ

ಮತದಾನ ಮಾಡಿದ ಚಂದ್ರಶೇಖರ ಶಿವಾಚಾರ್ಯಶ್ರೀ

ಮತದಾನ ಮಾಡಿದ ಚಂದ್ರಶೇಖರ ಶಿವಾಚಾರ್ಯಶ್ರೀ

ಯರಗಟ್ಟಿ 07: ಬಿರುಸಿನ ಮತದಾನ ನಡೆಯುತ್ತಿದೆ. ಜನಸಾಮಾನ್ಯರು ಸೇರಿದಂತೆ ರಾಜಕಾರಣಿಗಳು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದರ ನಡುವೆ ಸ್ಥಳಿಯ ಮಳಿಮಲ್ಲೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮತ ಚಲಾಯಿಸಿದರು.  

ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಅವರು ವೋಟ್ ಮಾಡಿದರು. ಬಳಿಕ ಮಾತನಾಡಿದ ಶ್ರೀಗಳು, ಮತದಾನ ಎನ್ನುವುದು ಯೋಗ್ಯರಿಗೆ ಮತ ನೀಡುವಂಥದ್ದು. ಆಮಿಷಕ್ಕೆ ಬಿದ್ದು ವೋಟ್ ಮಾರಿಕೊಳ್ಳಬಾರದು. ಯಾರಿಗೆ ಮತ ಕೊಡುತ್ತಿದ್ದೇವೆ, ಏಕೆ ಮತದಾನ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅರಿವಿರಬೇಕು. ಯೋಗ್ಯರಿಗೆ ಮತ ನೀಡಬೇಕು. ಐದು ವರ್ಷಗಳಿಗೊಮ್ಮೆ ಸಿಗುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. 


ಸುದ್ದಿ ಓದಿ