ಯರಗಟ್ಟಿ

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ಯರಗಟ್ಟಿ 08: ಸಮೀಪದ ಸತ್ತಿಗೇರಿ ಗ್ರಾಮದ ಕನರ್ಾಟಕ ಪಬ್ಲಿಕ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿಧ್ಯಾಥರ್ಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು ಸಾಂಕ್ರಾಮಿಕ ರೋಗಗಳು ಬರದಂತೆ ವೈಯಕ್ತಿಕ ಆರೋಗ್ಯದ ಕಾಳಜಿ ಪರಿಸರ ನೈರ್ಮಲ್ಯದ ಶುಚಿತ್ವ ಕೈಗಳ ಶುಚಿತ್ವ  ಶೌಚಾಲಯ ಮತ್ತು  ಪಾದರಾಕ್ಷೆಗಳ ಬಳಕೆಯ ಅವಶ್ಯಕತೆ ಇದೆ. 

ಶಾಲಾ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ರಕ್ತಹೀನತೆ ತಡೆಗಟ್ಟಲು ಮಧ್ಯಾಹ್ನದ ಬಿಸಿ ಊಟ ವಿಪ್ಸ ಮಾತ್ರೆಗಳ ಬಳಕೆ ಕ್ಷೀರಭಾಗ್ಯ ಶೂಭಾಗ್ಯ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಇವೆಯೆಂದು ಎಂದು ಯರಗಟ್ಟಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ ಹೇಳಿದರು. 

ಆತ್ಮಹತ್ಯೆ ರಕ್ತಹೀನತೆ ಬಾಲ್ಯ ವಿವಾಹ ಹೆಚ್ಆಯ್ವಿ/ಏಡ್ಸ ಇವುಗಳು ಹದಿಹರೆಯದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಾಗಿವೆ. ಇವುಗಳನ್ನು ನಿಯಂತ್ರಿಸಲು ಯೊಗ ಧ್ಯಾನ ವ್ಯಾಯಾಮ ಆರೋಗ್ಯ ಶಿಕ್ಷಣದ ಮಾಹಿತಿ ಅವಶ್ಯಕವಾಗಿದೆ ಹಾಗೂ ಆರೋಗ್ಯಕ್ಕೆ ಸಂಭಂದಿಸಿದ ವಿಷಯಗಳನ್ನು ಮನೆ ಮನೆಗೆ ತಲುಪಿಸುವಂತೆ ಆರೋಗ್ಯ ನಿರಿಕ್ಷಣಾಧಿಕಾರಿಯಾದ ಉಮೇಶ ಬೇಟಗೇರಿ ಕಿವಿ ಮಾತು ಹೇಳಿದರು. 

ನಂತರ ವೈಯಕ್ತಿಕ ಆರೋಗ್ಯ, ಆಯುಷ್ಮಾನ್ ಭಾರತ ಆರೋಗ್ಯ ಕನರ್ಾಟಕ, ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳು ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಗೆ ಪ್ರಥಮ, ದ್ವಿತಿಯ, ತೃತಿಯ ಪ್ರಶಸ್ತಿ ಪ್ರಮಣ ಪತ್ರ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಎಸ್. ಆರ್. ಸಿಂಗಾರಗೊಪ್ಪ ಉಪಪ್ರಾಂಶುಪಾಲರು ಇವರು ವಹಿಸಿದ್ದರು. ಸದರಿ ಸಮಾರಂಭದಲ್ಲಿ ಎಸ್ಡಿಎಸ್ಸಿ ಸ್ಥಾಯಿಸಮಿತಿ ಅಧ್ಯಕ್ಷ ಮಲ್ಲಯ್ಯ ಹಿರೇಮಠ, ಎಸ್ಡಿಎಸ್ಸಿ ಸದಸ್ಯರಾದ ಈರಣ್ಣಾ ಹೊಸಮನಿ ಶಿಕ್ಷಕರಾದ ವಾಯ್. ಆರ್. ಕೊಟಗಿ, ಎಸ್. ಎಂ. ಜೋಲಾಪೂರೆ, ಜಿ. ಬಿ. ಪಾಟೀಲ ವಿಧ್ಯಾಥರ್ಿಗಳು ಹಾಜರಿದ್ದರು. ಈ. ಬಿ. ಪಾಟೀಲ ನಿರೂಪಿಸಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ