ಯರಗಟ್ಟಿ

ಕೇಂದ್ರ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ

ಕೇಂದ್ರ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ

ಯರಗಟ್ಟಿ 06: ಬರ ಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಪರಿಸ್ಥಿತಿಯನ್ನು ಪರೀಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ತಾಲೂಕಿಗೆ ಆಗಮಿಸಿದೆ. 

ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು,  ನೇತೃತ್ವದ ಕೇಂದ್ರ ತಂಡ ತಾಲೂಕಿನಲ್ಲಿ ಬರ ಅಧ್ಯಯನ ಮಾಡಿತು. 

ತಂಡವು ಮೊದಲಿಗೆ ಸಮೀಪದ ನುಗ್ಗಾನಟ್ಟಿ ಗ್ರಾಮದ ಶಶಿನಾಯ್ಕ ಕಾಟನಾಯ್ಕ ರೈತನ ಜಾಮೀನಿಗೆ ಭೇಟಿ ನೀಡಿ ಹತ್ತಿ ಬೆಳೆ ಪರಿಸ್ಥಿತಿಯನ್ನು ವೀಕ್ಷಿಸಿ. ಬಳಿಕ ಕುರುಬಗಟ್ಟಿ ಗ್ರಾಮದ ಚಂದ್ರ​‍್ಪ ಗಸ್ತಿ ಮತ್ತು ಬಸವಣ್ಣೆಪ್ಪ ಉಳ್ಳೇಗಡ್ಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಶೇಂಗಾ ಮತ್ತು ತೊಗರೆ, ನವಣೆ, ಗೋವಿನಜೋಳ, ಹತ್ತಿ ಬೆಳೆಗಳ ಪರೀಶೀಲನೆ ಮಾಡಿದರು. 

ಜಿಲ್ಲಾಧಿಕಾರಿ ನೀತೀಶ ಪಾಟೀಲ ಹಾಗೂ ಕೃಷಿ ಇಲಾಖೆಯ ನಿರ್ದೇಶಕ ಶಿವಪ್ರಕಾಶ ಪಾಟೀಲ, ಯರಗಟ್ಟಿ ತಹಶೀಲ್ದಾರ ಎಮ್ ಎನ್ ಮಠದ, ಸವದತ್ತಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಜಿ.ಪಂ.ಎಇಇ ಎಚ್‌. ಎ. ಕದ್ರಾಪೂರಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾತ ನೀಡಿದರು. 

ಕಂದಾಯ ನೀರೀಕ್ಷಕ ವಾಯ್‌. ಎಫ್‌. ಮುರ್ತೇನ್ನವರ, ಗ್ರಾಮ ಆಡಳಿತಾಧಿಕಾರಿ ಎ. ಬಿ. ಹುಣಶ್ಯಾಳ, ಪಿಡಿಒ ವಿ. ಎಂ. ಕೊಳವಿ, ಕೃಷಿ ಅಧಿಕಾರಿಗಳಾದ ಎಂ. ಜಿ. ಕಳಸಪ್ಪನವರ, ಆರ್‌. ಬಿ. ದಾಸರ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ರೈತರಾದ ಮಾರುತಿ ಕೊಪ್ಪದ, ಬಾಪು, ಅಂಚಿ, ಮಾರುತಿ ಪುಲಿ, ಶಿವಾನಂದ ಪುಲಿ, ಕರೆಪ್ಪ ಕೊಮರಿ, ಪುಂಡಲೀಕ ಮಲಕನಕೊಪ್ಪ, ಹನುಮಂತ ಗುಗ್ಗರಿ ಇದ್ದರು. 

ಯರಗಟ್ಟಿ ಹೋಬಳಿಯಲ್ಲಿ ಬರುವ ಕುರುಬಗಟ್ಟಿ, ಬೂದಿಗೊಪ್ಪ, ಯರಗಣವಿ, ನುಗ್ಗಾನಟ್ಟಿ,  ಶೇ.50 ರಿಂದ 60ಅ ಹೆಚ್ಚು ಬೆಳೆ ನಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಹಿನ್ನೆಲೆಯಲ್ಲಿ ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದ ಕಾರಣ ಇಂದು ಕೇಂದ್ರ ಬರ ಅಧ್ಯಯನ ತಂಡ ಅಧ್ಯಯನ ಮಾಡಿತು. 

ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ 


ಸುದ್ದಿ ಓದಿ