ಚಿಕ್ಕೋಡಿ

ಚಿಕ್ಕೋಡಿ ಸಿಟಿಇ ಸಂಸ್ಥೆಯ ಶತಮಾನೋತ್ಸವ: ವಿಜೃಂಭನೆಯಿಂದ ಅನ್ನೋತ್ಸವ

ಚಿಕ್ಕೋಡಿ ಸಿಟಿಇ ಸಂಸ್ಥೆಯ ಶತಮಾನೋತ್ಸವ: ವಿಜೃಂಭನೆಯಿಂದ ಅನ್ನೋತ್ಸವ

ಘಮಘಮಿಸುವ ಖಾದ್ಯಗಳ ಘಮಲು: ವಿವಿಧ ಬಗೆ ಬಗೆ ತಿಂಡಿ-ತಿನಿಸು ಸವಿದು ಖುಷಿ ಪಟ್ಟ ಆಹಾರ ಪ್ರೀಯರು 

ಚಿಕ್ಕೋಡಿ 17: ಚಿಕ್ಕೋಡಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಟಿಇ ಸಂಸ್ಥೆಯ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪ್ರಥಮವಾಗಿ ಆಯೋಜಿಸಿದ ಅನ್ನೋತ್ಸವ ವಿಜೃಂಭನೆಯಿಂದ ನಡೆಯಿತು. ವಿವಿಧ ಬಗೆಯ ತಿಂಡಿ-ತಿನಿಸುಗಳಿದ್ದವು. ಕಂಡಲ್ಲೆಲ್ಲ ಘಮಘಮಿಸುವ ಖಾದ್ಯಗಳ ಘಮಲ ಘಮ್ಮೆಂದು ಪಸರಿಸಿ ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. 

ಒಂದೆಡೆ ಕೆಲವು ಜನರು ಗುಂಪು ಗುಂಪಾಗಿ ಬಾಯಿ ಚಪ್ಪರಿಸಿಕೊಂಡು ದಪಾಟಿ, ಚುಡಾ, ಸಮೋಸಾ, ಬೋಂಡಾ ತಿನ್ನುತ್ತಿದ್ದರೆ, ಮತ್ತೊಂದೆಡೆ ಭಜ್ಜಿ, ಪಾನಿಪುರಿ, ಶೇಂಗಾ ಹೋಳಿಗೆ, ದಾಬೇಲಿ ತಿನ್ನಲು ಜನ ಮುಗಿಬಿದ್ದಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪಾಲಕರು ತಮ್ಮ ಕೈ ರುಚಿ ತೋರಿಸಲು ವಿವಿಧ  ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ಆಹಾರ ಪ್ರೀಯರ ಬಾಯಲ್ಲಿ ನೀರೂರಿಸಿದರು. ಸುಮಾರು 200 ಅಧಿಕ ಹೆಚ್ಚಿನ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಪ್ರತ್ಯೇಕ ಟೇಬಲ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಿಟಿಇ ಸಂಸ್ಥೆಯವರು ಕಲ್ಪಿಸಿದ್ದರು. 

ಆಹಾರ ಮೇಳದಲ್ಲಿ ಮಹಿಳೆಯರು ತಯಾರಿಸಿದ್ದ ಮಿಲ್ಕ್‌ ಶೇಕ್, ಢೋಕಳಾ, ಪ್ರೂಟ್ ಕಸ್ಟರ್ಡ, ಹುಬ್ಬಳ್ಳಿ ಗಿರಮಿಟ್, ಅಂಟಿನ ಉಂಡಿ, ಪಾನಿಪೂರಿ, ಗೋಬಿಮಂಚೂರಿ, ಮಸಾಲೆ ದೋಸೆ, ಹಣ್ಣಿನ ಸಲಾಡ್, ಜ್ಯೂಸ್, ಮಜ್ಜಿಗೆ, ಬಜ್ಜಿ, ಬೋಂಡಾ, ವಡಾ-ಪಾವ್, ಚುರುಮುರಿ, ಟೋಷ್ಟ, ಸಜ್ಜಿ ರೋಟ್ಟಿ, ಶೇಂಗಾ ಚಟ್ನಿ, ಹೀಗೆ ಹತ್ತು ಹಲವಾರು ತಿಂಡಿ-ತಿನಿಸುಗಳ ಪದಾರ್ಥಗಳನ್ನು ತಯಾರಿಸಿ ನಗರದ ಆಹಾರ ಪ್ರೀಯರ ಮನ ತಣಿಸಿದರು. ಆಹಾರ ಮೇಳದಲ್ಲಿ ಉತ್ತರ ಕರ್ನಾಟಕ ಗಿರಮಿಟ್‌. ಮಿರ್ಚಿ ಬಜಿ. ತುಪ್ಪ ಸವರಿದ ಶೇಂಗಾ ಹೋಳಿಗೆ. ಸಜ್ಜಿ ರೋಟ್ಟಿ. ಜುನಕಾ.ಪಾನಿ ಪುರಿ.ದಾಬೇಲಿ ಸೇರಿದಂತೆ ಮುಂತಾದ ಖಾಧ್ಯಗಳನ್ನು ಸವಿಯಲು ಜನ ಮುಗಿಬಿದ್ದಿದ್ದರು. ಪ್ರಭುವಾಡಿ ಅನೀಲ ಮೋರೆ ತಯಾರಿಸಿದ ವೆಜ್ ಲಾಲಿಪಾಪ, ಮಹಾಲಕ್ಷ್ಮೀ ಪೂಜೇರಿ ಮತ್ತು ಸವಿತಾ ಪಾಟೀಲ ತಯಾರಿಸಿದ ದಾಬೇಲಿ, ಹಾಲಟ್ಟಿಯ ಪಾಟೀಲ ಕುಟುಂಬ ತಯಾರಿಸಿದ ಬ್ರೆಡ್ ಮತ್ತು ಮಿರಚಿ ಭಜ್ಜಿಯನ್ನು ಆಹಾರ ಪ್ರೀಯರು ಬಾಯಿ ಚಪ್ಪರಿಸಿ ಸವಿದು ಹರ್ಷ ವ್ಯಕ್ತಪಡಿಸಿದರು. 

ಸಿಟಿಇ ಶಿಕ್ಷಣ ಸಂಸ್ಥೆ ಆರಂಭವಾಗಿ 100 ವರ್ಷ ಪೂರೈಕೆ ಮಾಡಿದೆ. ಇದರ ಪ್ರಯುಕ್ತ ಈ ವರ್ಷದಿಂದ ಶತಮಾನೋತ್ಸವ ಆಚರಣೆ ಆಚರಿಸುವ ಸಂದರ್ಭದಲ್ಲಿ ಮೊದಲಿಗೆ ಆಹಾರ ಮೇಳ ಆಯೋಜನೆ ಮಾಡುವ ಮೂಲಕ ನಗರದ ಮಹಿಳೆಯರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಿಂಡಿ-ತಿನಿಸು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು ಎನ್ನುತ್ತಾರೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ.  

ಅನ್ನೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು. ಸಹಕಾರಿ ಮಹಾಮಂಡಳದ ನಿರ್ದೇಶಕ ಜಗದೀಶ ಕವಟಗಿಮಠ. ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ. ಉಪಾಧ್ಯಕ್ಷ ವಿಜಯ ಮಾಂಜ್ರೇಕರ. ನಿರ್ದೇಶಕರಾದ ಸುಧೀರ ಕುಲಕರ್ಣಿ. ಅರುಣ ಕುಲಕರ್ಣಿ. ವಿ.ಟಿ.ಶೆಡಬಾಳೆ. ಸಂಜಯ ಅಡಕೆ. ಎಸ್‌.ಎಸ್‌.ಕುಲಕರ್ಣಿ. ವಿ.ಸಿ.ಕುಲಕರ್ಣಿ. ಆಡಳಿತಾಧಿಕಾರಿ ಎಸ್‌.ಜಿ.ಜಹಾಗೀರದಾರ.ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ ಸೇರಿದಂತೆ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ