ಕಲೆ, ಸಂಸ್ಕೃತಿ, ಪರಂಪರೆ ಉಳಿಸಲು ಉತ್ಸವಗಳ ಆಚರಣೆ: ಡಿ.ಕೆ. ಶಿವಕುಮಾರ್

ಕಲೆ, ಸಂಸ್ಕೃತಿ, ಪರಂಪರೆ ಉಳಿಸಲು ಉತ್ಸವಗಳ ಆಚರಣೆ: ಡಿ.ಕೆ. ಶಿವಕುಮಾರ್

ಬಳ್ಳಾರಿ. ಹಂಪಿ (ಎದುರು ಬಸವಣ್ಣ ವೇದಿಕೆ) 03: ಕನ್ನಡ ನಾಡಿನ ವೈಭವೋಪೇತ ಕಲೆ, ವೈವಿಧ್ಯಮಯ ಸಂಸ್ಕೃತಿ, ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಉತ್ಸವಗಳನ್ನು ಆಚರಿಸುತ್ತಿದ್ದೇವೆ ಎಂದು ರಾಜ್ಯ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

  ಹಂಪಿಯ ಎದುರು ಬಸವಣ್ಣ ಬಳಿಯ ಪ್ರಧಾನ ವೇದಿಕೆಯಲ್ಲಿ ನಾಡದೇವತೆ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಎರಡು ದಿನಗಳ ಕಾಲ ಆಚರಿಸಲಾಗುತ್ತಿರುವ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿರುವುದರಿಂದ ಹಂಪಿ ಉತ್ಸವವನ್ನು ಈ ಬಾರಿ ಆಚರಿಸಬೇಕೋ, ಬೇಡವೋ ಎಂಬ ಜಿಜ್ಞಾಸೆಗಳು ನಡೆಯುತ್ತಿದ್ದವು.  ಆದರೆ ಈ ಭಾಗದ ಜನರ, ಕಲಾವಿದರ ಹಾಗೂ ಜನಪ್ರತಿನಿಧಿಗಳ ಆಶಯದಂತೆ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಮ್ಮ ಸಕರ್ಾರ ನಿಧರ್ಾರ ಕೈಗೊಂಡು, ಅದರಂತೆಯೇ ಉತ್ಸವವನ್ನು ಸಾಕಾರಗೊಳಿಸಿದೆ.  ಹಂಪಿ ಉತ್ಸವಕ್ಕೆ ಭವ್ಯ ಪರಂಪರೆ ಇದೆ.  ಹಂಪಿ ಉತ್ಸವವು ಸಕರ್ಾರದ ಉತ್ಸವವಲ್ಲ, ಇದು ಜನರ ಉತ್ಸವವಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.      'ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಮನ ಪಾದ ಸುಖವೇ ಭಾಗ್ಯವಯ್ಯ ಎಂಬ ಪುರಂದರದಾಸರ ನುಡಿಗಳನ್ನು ಮೆಲುಕು ಹಾಕಿದ ಸಚಿವರು, ಹಂಪಿ ಉತ್ಸವವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಪಾಲಿಗೆ ಭಾಗ್ಯವಾಗಿದೆ ಎಂದರು.  ಸಂಸದ ಬಿ.ಎಸ್. ಉಗ್ರಪ್ಪ ಮಾತನಾಡಿ, ಈ ನಾಡಿನ ಭವ್ಯ ಪರಂಪರೆ ಹಾಗೂ ಶಿಲ್ಪ ಕಲಾ ವೈಭವ ಮತ್ತು ಇತಿಹಾಸ ಹೊಂದಿರುವ ಹಂಪಿ ಉತ್ಸವವನ್ನು ಪ್ರತಿ ವರ್ಷ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿಸುವಂತಾಗಲು, ಪ್ರತಿ ಬಜೆಟ್ನಲ್ಲೂ ಕನಿಷ್ಟ 10 ಕೋಟಿ ರೂ. ಗಳನ್ನು ಹಂಪಿ ಉತ್ಸವಕ್ಕಾಗಿಯೇ ಮೀಸಲಿಡುವಂತಾಗಬೇಕು.  ಈ ವರ್ಷ ಹಂಪಿ ಉತ್ಸವ ನಡೆಯಲ್ಲ ಎಂದೇ ಬಹುತೇಕರು ಭಾವಿಸಿದ್ದರು.  ಆದರೆ ರಾಜ್ಯ ಸಕರ್ಾರದ ಸಹಕಾರ ಹಾಗೂ ಒತ್ತಾಸೆಯಿಂದ ಈ ಬಾರಿ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ.  ಇಡೀ ವಿಶ್ವದಲ್ಲಿ ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ವ್ಯವಹಾರ ನಡೆಸಿದ ಏಕೈಕ ಸಾಮ್ರಾಜ್ಯವೆಂದರೆ, ಅದು ವಿಜಯನಗರ ಸಾಮ್ರಾಜ್ಯ ಮಾತ್ರವಾಗಿದೆ.  ಇಂತಹ ಖ್ಯಾತಿ ಹೊಂದಿರುವ ಹಂಪಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ.  ಚಲನಚಿತ್ರ ನಟ ದರ್ಶನ್ ಅವರ ನಾಯಕತ್ವದಲ್ಲಿ ರಾಜ್ಯ ಚಲನಚಿತ್ರ ನಿಮರ್ಾಪಕರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಮುನಿರತ್ನ ಅವರು ಶ್ರೀ ಕೃಷ್ಣದೇವರಾಯರ ಕುರಿತು ಚಲನಚಿತ್ರವೊಂದನ್ನು ನಿಮರ್ಿಸಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.  ಅದು ಆದಷ್ಟು ಶೀಘ್ರ ಈಡೇರಲಿ ಎಂದರು.

  ಚಲನಚಿತ್ರ ರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಹಂಪಿ ಉತ್ಸವದ ಯಶಸ್ಸಿಗೆ ಶುಭ ಕೋರಿದರಲ್ಲದೆ, ಇಲ್ಲಿನ ಶಿಲ್ಪ ಕಲೆಗಳು, ಕಲ್ಲು ಕಲ್ಲಿನಲಿ ನಿಮರ್ಿಸಿರುವ ಬೃಹತ್ ಕಟ್ಟಡಗಳನ್ನು ಇನ್ನೂ 100 ಶತಮಾನಗಳೇ ಕಳೆದರೂ ಯಾರೂ ನಿಮರ್ಿಸಲು ಸಾಧ್ಯವಿಲ್ಲ.  ಇಂತಹ ಭವ್ಯ ಇತಿಹಾಸ ಹೊಂದಿರುವ ಹಂಪಿಯ ಸ್ಮಾರಕಗಳನ್ನು ಯಾರೂ ಹಾಳುಗೆಡವದೆ, ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಪರಿಚಯಿಸುವಂತಾಗಬೇಕು.  ಕನ್ನಡ ಅಭಿಮಾನಿಗಳು ಕನ್ನಡ ಸಿನಿಮಾಗಳನ್ನು ವೀಕ್ಷಿಸಿ, ಕನ್ನಡ ಚಲನಚಿತ್ರಗಳನ್ನು ಪ್ರೋತ್ಸಾಹಿಸಿ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಂಪಿ ಉತ್ಸವ 1986 ರಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಮುತ್ಸದ್ದಿ ರಾಜಕಾರಣಿಯಾಗಿದ್ದ ದಿವಂಗತ ಎಂ.ಪಿ. ಪ್ರಕಾಶ್ ಅವರ ಆಸಕ್ತಿಯಿಂದಾಗಿ, ಹಂಪಿ ಉತ್ಸವವು ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಜನೋತ್ಸವವಾಗಿ ರೂಪುಗೊಂಡಿದೆ ಎಂದರು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಮುಜರಾಯಿ, ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ವಿಧಾನಪರಿಷತ್ ಸದಸ್ಯರುಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಸಂಸದೀಯ ಕಾರ್ಯದಶರ್ಿ ಎಂ.ಎ. ಗೋಪಾಲಸ್ವಾಮಿ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ನಿತೀಶ್, ಸೇರಿದಂತೆ ಹಲವು ಗಣ್ಯರು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.  ಜಿಲ್ಲಾಧಿಕಾರಿ ಡಾ. ವಿ. ರಾಮ ಮನೋಹರ್ ಪ್ರಸಾತ್ ಅವರು ಸ್ವಾಗತಿಸಿದರು.  ಹಂಪಿ ವಿ.ವಿ. ಸಂಗೀತ ವಿಭಾಗದ ವಿದ್ಯಾಥರ್ಿಗಳು ನಾಡಗೀತೆ ಪ್ರಸ್ತುತಪಡಿಸಿದರು.


ಸುದ್ದಿ ಓದಿ