ಮಧುಕೇಶ್ವರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಬನವಾಸಿ: ಬನವಾಸಿಯ ಉಮಾಮಧುಕೇಶ್ವರ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಪ್ರದಾಯದಂತೆ ಆಚರಿಸಲಾಯಿತು. ಪ್ರತಿವರ್ಷದಂತೆ ವಸುದೇವ ದೇವಕಿ ಸಹಿತ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಯನ್ನು ದೇವಸ್ಥಾನ ಪುರೋಹಿತರಾದ ವೇ. ಸುರೇಶ ಪುರೋಹಿತರು ಪೂಜಿಸಿದರು. ದೇವಕೀ ಕಂದ ಶ್ಯಾಮಲವರ್ಣದ ಮಗುವಿಗೆ ’ಕೃಷ್ಣ’ ಎಂದು ನಾಮಕರಣಶಾಸ್ತ್ರ ಮಾಡಲಾಯಿತು. ಸಂದರ್ಭದಲ್ಲಿವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಸದಸ್ಯರಾದ ಪ್ರಕಾಶ ಬಂಗ್ಲೆ, ಶಿವಯೋಗಿ ಉಳ್ಳಾಗಡ್ಡಿ, ಉಪಸ್ಥಿತರಿದ್ದರು.