ಕಾರವಾರ

ಮಡಿವಾಳ ಮಾಚಿದೇವ ಎಲ್ಲ ಸಮಾಜಕ್ಕೂ ಆರಾಧಕರು

ಮಡಿವಾಳ ಮಾಚಿದೇವ ಎಲ್ಲ ಸಮಾಜಕ್ಕೂ ಆರಾಧಕರು

ಕಾರವಾರ 01: ಮಡಿವಾಳ ಮಾಚಿದೇವ ಜಯಂತಿ ಕೇವಲ ಮಡಿವಾಳ ಸಮಾಜದವರಿಗೆ ಮಾತ್ರವಲ್ಲ, ಸಮಾಜ ಸುಧಾರಕರಾದ ಮಾಚಿದೇವನವರು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಹೇಳಿದರು 

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯವತಿಯಿಂದಜಿಲ್ಲಾಧಿಕಾರಿಕಚೇರಿಯ ಸಭಾಂಗಣದಲ್ಲಿ ಸೋಮವಾರಆಚರಿಸಲಾದ ಮಡಿವಾಳ ಮಾಚಿದೇವಜಯಂತಿಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿವಚನಗಳಿಂದಲೇ ಸಮಾಜವನ್ನುತಿದ್ದುವ ಕೆಲಸ ಮಾಡುತಿದ್ದ ಮಾಚಿದೇವನವರು12 ನೇ ಶತಮಾನದ ಬಸವಣ್ಣನ ಸಮಕಾಲೀನರು.ರಾಜಾಶ್ರಯದಲ್ಲಿದ್ದೂಸಮಾಜದಒಳಿತಿಗಾಗಿ ತಮ್ಮ ವಚನ ಸಾಹಿತ್ಯದ ಮೂಲಕವೇ ಜನಸಾಮನ್ಯರಲ್ಲಿಅರಿವು ಮೂಡಿಸುತ್ತಿದ್ದರು.ಸ್ವಇಚ್ಛೆಯಿಂದಒಡಾಡಲು, ಮಾತನಾಡಲು ಸ್ವಾತಂತ್ಯ್ರವಿದ್ದರೂ ಸಮಾಜದ ಕೆಡಕುಗಳ ಬಗ್ಗೆ ಮಾತನಾಡಲು ಹಿಂಜರಿಯುವ ಈ ಕಾಲದವರಿಗೆ ಮಾಚಿದೇವನಂತವರುದಾರಿ ದೀಪವಗಿದ್ದಾರೆ.ಅಂದಿನ ಬಾಲ್ಯ ವಿವಾಹ, ವಿದವಾ ವಿವಾಹ, ಸಮಾನತೆಯ ಬಗೆಗಿನ ಕ್ರಾಂತಿಯನ್ನು ಈ ಕಾಲಕ್ಕೆ ಹೋಲಿಸಲು ಸಾಧ್ಯವಿಲ್ಲ ಎಂದುಅಭಿಪ್ರಾಯ ಪಟ್ಟರು.  

ಅಪರಜಿಲ್ಲಾಧಿಕಾರಿಹೆಚ್.ಕೆ. ಕೃಷ್ಣಮೂರ್ತಿರವರು ಮಾತನಾಡಿ, ಮಾಚಿದೇವನವರ ಹುಟ್ಟು ಹಾಗೂ ಪೌರಾಣಿಕ ಹಿನ್ನೆಲೆಯ ಬಗ್ಗೆ ತಿಳಿಸಿ, ಅರಾಜಕತೆ, ಅಸಮಾನತೆ, ಶೋಷಣೆ, ಜಾತಿ ವ್ಯವಸ್ಥೆಇದ್ದ 12 ನೇ ಶತಮಾನದಲ್ಲಿ ಬದಲಾವಣೆತಂದ ಪ್ರಮುಖರು ಮಡಿವಾಳ ಮಾಚಿದೇವನವರು. ಇಂತಹ ಆಚರಣೆಗಳು ಕೇವಲ ಆಚರಣೆಗಳಾಗದೇ ಶಿಕ್ಷಣ ಸಮಾನತೆಯ ಮೂಲ ಎಂದ, ಸಮಾನತೆಯ ಸ್ವಾತಂತ್ರ್ಯವನ್ನುಎತ್ತಿ ಹಿಡಿದ ಮಾಚಿದೇವನಂತವರ ಆದರ್ಶಗಳನ್ನು ರೂಢಿಸಿಕೊಳ್ಳುವುದು ಬಹುಮುಖ್ಯಎಂದರು.

ಕಾರ್ಯಕ್ರಮದಲ್ಲಿತಾಲೂಕು ಮಡಿವಾಳ ಸಮಾಜದಅಧ್ಯಕ್ಷಹಾಗೂ ವಕೀಲರಾದ ನಾಗೇಶ್ ಮಡಿವಾಳ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದಎನ್.ಜಿ. ನಾಯ್ಕ್‍ಅವರು ಉಪಸ್ಥಿತರಿದ್ದರು.

ಸುದ್ದಿ ಓದಿ