ಶಾಸಕರ ಆಪ್ತ ಸಹಾಯಕ ಕಂಬತ್ ಧನರಾಜ್ ಜನ್ಮದಿನ ಆಚರಣೆ
ಲೋಕದರ್ಶನ ವರದಿ
ಕಂಪ್ಲಿ, ಆಗಸ್ಟ್ 28: ಪಟ್ಟಣದ ಅತಿಥಿ ಗೃಹದಲ್ಲಿ ಶಾಸಕ ಜೆ.ಎನ್. ಗಣೇಶ್ ಅವರ ಆಪ್ತ ಸಹಾಯಕ ಕಂಬತ್ ಧನರಾಜ್ ಅವರ ಜನ್ಮದಿನವನ್ನು ಬುಧವಾರ ಸಂಜೆ ಅಭಿಮಾನಿಗಳು ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಎಸ್. ರುದ್ರಮುನಿ, ಧನರಾಜ್ ಅವರ ಪ್ರಾಮಾಣಿಕತೆ ಮತ್ತು ಕಾರ್ಯತತ್ಪರತೆ ನಮಗೆ ಸದಾ ಸ್ಫೂರ್ತಿಯಾಗಿದೆ. ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ. ಅವರ ಎಲ್ಲ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು. ಶಾಸಕರ ಆಪ್ತ ಸಹಾಯಕರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಧನರಾಜ್ ಅವರು ಮುಂದೆಯೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.
ಜನ್ಮದಿನದ ಪ್ರಯುಕ್ತ ಮುಖಂಡರು, ಯುವಕರು, ಅಭಿಮಾನಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೇಕ್ ತಂದು, ಹೂವಿನ ಹಾರ ಹಾಕಿ ಧನರಾಜ್ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ್, ಡಿಎಸ್ ಪ್ರಸಾದ್, ಆಟೋ ರಘು, ಎಲ್ಲಪ್ಪ, ಕೋಟಾಲ್ ವಿರೇಶ್, ಇಮ್ತಿಯಾಜ್, ಟೈಲರ್ ಜಡೆೇಶ್, ಚಂದು, ಮೈತ್ರಿ ಬಸವರಾಜ್, ರಾಕೇಶ್, ಐಬಿ ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.