ತಾಳಿಕೋಟಿ

ಹಾಲುಮತ ಸಮಾಜದಿಂದ ಕನಕದಾಸ ಜಯಂತಿ ಆಚರಣೆ

ಹಾಲುಮತ ಸಮಾಜದಿಂದ ಕನಕದಾಸ ಜಯಂತಿ ಆಚರಣೆ


               ತಾಳಿಕೋಟಿ 28:  ಪಟ್ಟಣದಲ್ಲಿ ಹಾಲುಮತ ಸಮಾಜದ ವತಿಯಿಂದ ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಯುವ ಮುಖಂಡರಾದ ಶಿವರಾಜ ಗುಂಡಕನಾಳ ನಾಗೂರ ಅವರು ಮಾತನಾಡಿ ದಾಸ ಪರಂಪರೆಯಲ್ಲಿಯೇ ಅತೀ ಶ್ರೇಷ್ಠರಾದವರು ಸಂತ ಕನಕದಾಸರು. ಅವರು ತಮ್ಮ ಕೀರ್ತನೆಗಳ ಮೂಲಕ ಜನಸಾಮಾನ್ಯರಿಗೆ ಭಗವಂತನ ನೈಜ ದರ್ಶನವನ್ನು ಮಾಡಿಸಿದರು.                           

                ವರ್ಷಕ್ಕೊಂದು ಬಾರಿ ಅವರ ಜಯಂತಿಯನ್ನು ಆಚರಿಸದರೆ ಸಾಲದು, ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ ಎಂದರು. ಮುಖಂಡರಾದ ವೀರೇಶ ಬಾಗೇವಾಡಿ ಹಾಗೂ ಜೈ ಭೀಮ ಮುತ್ತಗಿ ಕನಕದಾಸರ ಜೀವನ ಸಂದೇಶದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕರವೇಯ ಅಬೂಬಕರ ಲಾಹೋರಿ ಒಳಗೊಂಡ ಹಾಲುಮತ ಸಮಾಜದ ಗಣ್ಯರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ