ತಾಲೂಕಾಡಳಿತದಿಂದ ಸರಳವಾಗಿ ಕನಕದಾಸರ ಜಯಂತಿ ಆಚರಣೆ
ಯರಗಟ್ಟಿ 30: ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ಕನಕದಾಸರ ಜಯಂತಿಯನ್ನು ತಾಲೂಕಾ ಆಡಳಿತದ ವತಿಯಿಂದ ಕನಕದಾಸರ 536 ನೇ ಜಯಂತಿಯನ್ನು ಅದ್ದೂರಿಯಾಗಿ ಶುಕ್ರವಾರ ಆಚರಿಸಲಾಯಿತು.
ಭಕ್ತ ಕನಕ ದಾಸರ ಭಾವಚಿತ್ರಕ್ಕೆ ಸಮಾಜದ ಮುಖಂಡ ತಹಶೀಲ್ದಾರ ಎಮ್ ಎನ್ ಮಠದ ಹೂಮಾಲೆ ಹಾಕುವ ಮೂಲಕ ಪೂಜೆ ಸಲ್ಲಿಸಿ ಮಾತನಾಡಿ ಕನಕದಾಸರು ಕರ್ನಾಟಕದಲ್ಲಿ 15ದು 16 ನೇ ಶತಮಾನ ದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆ ಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಿಸುವುದು ಅಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನ ದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ಮೂಲಕ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ.
ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಪ್ರಕಾಶ ವಾಲಿ, ಪಿ. ಎಚ್. ಪಾಟೀಲ, ಶಿವಾನಂದ ಕರಿಗನ್ನವರ, ಶಂಕರ ಇಟ್ನಾಳ, ಮಂಜುನಾಥ ತಡಸಲೂರ, ರಫೀಕ್ ಡಿ ಕೆ, ರಾಮಣ್ಣ ದಳವಾಯಿ, ಲಕ್ಷ್ಮಣ ದಳವಾಯಿ, ನಿಖಿಲ ಪಾಟೀಲಹಣಮಂತ ಹಾರುಗೊಪ್ಪ, ಹಣಮಂತ ಪೂಜೇರ, ದುರಗಪ್ಪ ಹ. ದಳವಾಯಿ, ಲಕ್ಕಪ್ಪ ಸನ್ನಿಗನ್ನವರ, ವಿಠ್ಠಲ ತೊರಣಗಟ್ಟಿ, ಗೋಪಾಲ ದಳವಾಯಿ, ಶಾಲಾ ಮಕ್ಕಳು, ತಹಶೀಲ್ದಾರ ಕಚೇರಿ ಮತ್ತು ಪಟ್ಟಣದ ಪಂಚಾಯತ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.