ಹಿಂದು- ಮುಸ್ಲಿಂ ಸಮಾಜ ಸೇರಿಕೊಂಡು ಗೌರಿ ಗಣೇಶ ಹಬ್ಬ ಆಚರಣೆ
ಜಮಖಂಡಿ 09: ಹಿಂದು- ಮುಸ್ಲಿಂ ಸಮಾಜ ಸೇರಿಕೊಂಡು ಜಾತಿ,ಧರ್ಮ, ಭೇಧ, ಭಾವ ಮರೆತು ಭಾವೈಕತೆಯಿಂದ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಜನತಾ ಬಜಾರದಲ್ಲಿ ಗಣಪತಿ ಮಹಾಉತ್ಸವ ಸಮಿತಿಯ ಗೌರಿ ಗಣೇಶನ ಭವ್ಯ ಮೆರವಣೆಗೆಗೆ ವಿವಿಧ ಮಠಾಧೀಶರು ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿ ಮಾತನಾಡಿದ ಅವರು, ಹಿಂದು ಸಮಾಜದ ಜೊತೆಗೆ ಸೇರಿಕೊಂಡು ಮುಸ್ಲಿಂ ಸಮಾಜ ಭಾಂದವರು ಕೆಳೆದ 8 ವರ್ಷಗಳಿಂದ 11ನೇ ದಿನದ ಗಣಪತಿ ವಿಸರ್ಜನೆ ಸಮಯದಲ್ಲಿ ಮಾಹಾ ಅನ್ನಪ್ರಸಾದದ ವ್ಯವಸ್ಥೆಯನ್ನು ಮುಸ್ಲಿಂ ಸಮಾಜದವರು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ತಾಲೂಕಾ ಕ್ರೀಂಡಾಂಗಣದಲ್ಲಿ ಗಣಪತಿ ಮಹಾಉತ್ಸವ ಸಮಿತಿ ವತಿಯಿಂದ ಕೇದಾರನಾಥ ಮಂದಿರ ಹಾಗೆ ಮಂಟಪವನ್ನು ಮಾಡಲಾಗಿದೆ. ಹನ್ನೊಂದು ದಿನಗಳ ಕಾಲ ಪ್ರತಿದಿನ ವಿವಿಧ ಪೂಜೆಗಳನ್ನು ಹಾಗೂ ಅಭಿಷೇಕಗಳನ್ನು ಮಾಡಲಾಗುತ್ತದೆ. ಜನತೆಯ ಕಷ್ಟಗಳನ್ನು ನಿವಾರಣೆ ಮಾಡುವ ವಿನಾಯಕನ ಹಬ್ಬವನ್ನು ಅತೀ ಸಂತೋಷ,ಸಡಗರದಿಂದ ಆಚರಣೆಯನ್ನು ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರುದ್ರಸ್ವಾಮೀ ಮಠದ ಕೃಷ್ಣಾನಂದ ಅವಧಧೂತರು, ಶಿವಲಿಂಗ ಪಂಡಿತರಾಧ್ಯ ಶ್ರೀಗಳು ಹಾಗೂ ಓಂ ಶಾಂತಿಯ ಮಾತೇಯರು ಸೇರಿದಂತೆ ಅನೇಕ ಮುಖಂಡರು, ಯುವಕರು ಇದ್ದರು.