ಸೆ.28 ರಂದು ಭಗತ್ ಸಿಂಗ್ ಜಯಂತಿ ಆಚರಣೆ
ಯರಗಟ್ಟಿ 27: ಸಮೀಪದ ರೈನಾಪೂರ ಗ್ರಾಮದಲ್ಲಿ ಭಗತ್ ಸಿಂಗ್ ಫೌಂಡೇಶನ್ ವತಿಯಿಂದ ಭಗತ್ ಜಯಂತಿ ಆಚರಣೆ ಬೆಳಿಗ್ಗೆ 10ಗಂಟೆಗೆ ಭಗತ್ ಸಿಂಗ್ ಮೂರ್ತಿ ವಿಶೇಷ ಪೂಜೆ ಸಂ. 28 ರಂದು ರಾತ್ರಿ 8ಗಂಟೆಗೆ ಹಾಗೂ ಬಿ. ಬಿ. ಮೆಲೋಡಿಸ್ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. ಸಾನಿಧ್ಯವನ್ನು ಗಣಪತಿ ಮಹಾರಾಜರು, ಉದ್ಘಾಟನೆಯನ್ನು ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ, ಮುಖ್ಯ ಅಥಿತಿಗಳಾಗಿ ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಸುರೇಶ ಬಂಟನೂರ, ಗುರು ವಾಲಿ, ವಿಠ್ಠಲ ಬಂಟನೂರ, ಸೋಮಪ್ಪ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ರವಿಚಂದ್ರ ಆಚಮಟ್ಟಿ ತಿಳಿಸಿದ್ದಾರೆ.