ಬಿಜೆಪಿಯಿಂದ ಸಂಭ್ರಮದ ವಿಜಯೋತ್ಸವ
ರಾಣೀಬೆನ್ನೂರು 12: ಬಿಜೆಪಿ ಬಿಹಾರ ವಿಧಾನಸಭಾ ಹಾಗೂ ರಾಜ್ಯದ ಎರಡು ಕ್ಷೇತ್ರದ ಉಪಚುನಾವಣೆ ಹಾಗೂ ಪದವೀಧರ ಕ್ಷೇತ್ರ ಸೇರಿದಂತೆ ಇತರ ರಾಜ್ಯದ ಉಪಚುನಾವಣೆಗಳಲ್ಲೂ ಜಯಭೇರಿ ಭಾರಿಸಿರುವ ಹಿನ್ನೆಲೆ ಇಂದು ಬೆಳಿಗ್ಗೆ 11 ಗಂಟೆಗೆ ಅಂಚೆ ವೃತ್ತದ ಪಕ್ಷದ ಕಾರ್ಯಾಲಯದ ಆವರಣದಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.
ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಕೇಲಗಾರ ನಗರ ಘಟಕದ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಕೆ.ವಿ. ಶ್ರೀನಿವಾಸ್, ಕೆ.ಶಿವಲಿಂಗಪ್ಪ, ಎ.ಬಿ. ಪಾಟೀಲ, ಪ್ರಕಾಶ ಪೂಜಾರ, ಅನಿಲ್ ಸಿದ್ದಾಳಿ, ಬಸವರಾಜ ಹುಲ್ಲತ್ತಿ, ಬಸವರಾಜ ರೊಡ್ಡನವರ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.