ಸೌಂದತ್ತಿ

ಅದ್ದೂರಿಯಿಂದ ಮಾದರ ಚನ್ನಯ್ಯನವರ ಜಯಂತಿ ಆಚರಣೆ

ಅದ್ದೂರಿಯಿಂದ ಮಾದರ ಚನ್ನಯ್ಯನವರ ಜಯಂತಿ ಆಚರಣೆ

ಉಗರಗೋಳ(ತಾ.ಸವದತ್ತಿ) 28: ಇಂದಿನ ಕಲಿಯುಗದಲ್ಲಿ ಪ್ರತಿ ಸಮಾಜದ ಯುವ ಜನಾಂಗ, ಶರಣ, ಸಂತ, ಮಾಹಾತ್ಮರು ಹೇಳುವ  ಆಧ್ಯಾತ್ಮಿಕ ಪ್ರವಚನದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸುಂದರ ಬದುಕನ್ನು ಕಟ್ಟಿಕೊಳ್ಳಬೇಕೆಂದು ರೇಣುಕಾ ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಡಾ, ಅಂಬೇಡ್ಕರ ನಗರದ, ಹೂಲಿ ಅಜ್ಜನವರ ಮಠದಲ್ಲಿ ಶಿವಶರಣ ಮಾದರ ಚನ್ನಯ್ಯನವರ 974 ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು  ಬದುಕಿನಲ್ಲಿ ಆತ್ಮವಿಶ್ವಾಸವಿರಬೇಕು. ಮಹಾತ್ಮರು ಹೆಳುವ ಉಪದೇಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ, ಬಾಳಿನ ಬಂಡಿ ಸುಗಮವಾಗಿ ಸಾಗುತ್ತದೆ ಎಂದರು. 

ಹನಮಂತಪ್ಪ ಮ್ಯಾಗೇರಿ, ಪ್ರಕಾಶ ಮ್ಯಾಗೇರಿ, ಯಲ್ಲಪ್ಪ ಮಿಯಪ್ಪನವರ, ರಾಮು ಕಾಳಪ್ಪನವರ, ಪರಸಪ್ಪ ಬಸಲಿಂಗನವರ, ಸಿದ್ದಪ್ಪ ಮ್ಯಾಗೇರಿ, ಮಂಜುನಾಥ ಕೊಟೂರ, ವಿರುಪಾಕ್ಷ ಬೇವಿನಗಿಡದ, ಮುಡ್ಡಪ್ಪ ಮ್ಯಗೇರಿ ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ