ಶಾಂತರೀತಿಯಿಂದ ಮೊಹರಂ ಆಚರಿಸಿ: ಪಿಎಸ್ಐ ದೊಡಮನಿ
ತಾಳಿಕೋಟಿ06: ಬಾವೈಕ್ಯತೆಯ ಪ್ರತಿಕವಾಹಿರುವ ಮೊಹರಂ ಹಬ್ಬವನ್ನು ಎಲ್ಲರೂ ಕೂಡಿಕೊಂಡು ಶಾಮತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು ಎಂದು ಪಿಎಸ್ಐ ವಿನೋದ ದೊಟಮನಿ ತಿಳಿಸಿದರು.
ಮೊಹರಂ ಹಬ್ಬದ ನಿಮಿತ್ಯವಾಗಿ ನಿನ್ನೆ ಠಾಣೆಯಲ್ಲಿ ಕರೆದ ಸರ್ವಧರ್ಮದ ಗಣ್ಯರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನಗಳನ್ನು ನಾವೇಲ್ಲರೂ ಪಾಲಿಸುತ್ತ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ನೊಡಿಕೊಂಡು ಈ ಹಬ್ಬವನ್ನು ಆಚರಿಸುವುದರೊಂದಿಗೆ ಪೋಲಿಸ ಇಲಾಖೆಯೊಂದಿಗೆ ಎಲ್ಲ ರೀತಿಯಲ್ಲಯೂ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪರಾಧಿ ವಿಭಾಗದ ಎಸ್ಐ ರಂಗಪ್ಪ ಭಂಗಿ, ಎಮ್ ಎಲ್ ಪಟ್ಟದ, ಶಿವಾನಂದ ಹಾಲಗೊಡಿ, ಗಣ್ಯರಾದ ಬಿ ಎಸ್ ಪಾಟೀಲ ಯಾಳಗಿ, ಶಿದ್ದನಗೌಡ ಪಾಟೀಲ, ಕೆ ಎಂ ಡೊಣಿ, ಕಾಶಿನಾಥ ಮುರಾಳ, ವಾಸುದೇವ ಹೆಬಸೂರ, ಜಯಸಿಂಗ ಮೂಲಿಮನಿ, ಶಿವಶಂಕರ ಹಿರೇಮಠ, ಮಾಸೂಮಸಾಬ ಕೆಂಭಾವಿ, ಗೈಬುಶಾ ಮಕಾನದಾರ, ಮತ್ತೀತರು ಉಪಸ್ಥಿತರಿದ್ದರು.