ಶಿಗ್ಗಾವ್

ಸರಕಾರದ ನಿಯಮ ಪಾಲಿಸಿ ಮೋಹರಂ ಹಬ್ಬ ಆಚರಣೆ ಮಾಡಿ: ಕಲ್ಲೇಶಪ್ಪ

ಸರಕಾರದ ನಿಯಮ ಪಾಲಿಸಿ ಮೋಹರಂ ಹಬ್ಬ ಆಚರಣೆ ಮಾಡಿ: ಕಲ್ಲೇಶಪ್ಪ

ಶಿಗ್ಗಾವಿ 14: ಹಬ್ಬಗಳ ಆಚರಣೆಗೆ ನಮ್ಮದೇನೂ ಅಭ್ಯಂತರವಿಲ್ಲ ಆದರೆ ಗುಂಪು ಗುಂಪಾಗಿ ಜನ ಸೇರುವುದಕ್ಕೆ ನಮ್ಮ ನಿರ್ಭಂದವಿದೆ ಆದ್ದರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಮೋಹರಂ ಹಬ್ಬದ ಆಚರಣೆ ಮಾಡಿ ಎಂದು ಡಿವಾಯ್‌ಎಸ್‌ಪಿ ಓ ಬಿ ಕಲ್ಲೇಶಪ್ಪ ಹೇಳಿದರು. 

ಶನಿವಾರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಮೆರವಣಿಗೆಗೆ ಅವಕಾಶವಿಲ್ಲ ಸರಕಾರದ ನಿಯಮಗಳನ್ನು ಪಾಲಿಸಿ ಹಬ್ಬ ಆಚರಣೆ ಮಾಡಿ ಈ ಸಾಂಕ್ರಾಮಿಕ ರೋಗಗಳ ಹತೋಟಿಗೆ ಸರಕಾರ ಹಲವಾರು ನಿಯಮಗಳನ್ನು ಮಾಡಿದೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರದ ಜೊತೆಗೆ ಮಾರ್ಗಸೂಚಿಗಳ ಪಾಲನೆ ಮಾಡಲೇಬೇಕು ಎಂದು ತಾಕೀತು ಮಾಡಿದರು. 

ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು, ಪಂಜಾಗಳನ್ನು ಸ್ಥಾಪಿಸುವುದು ಹಾಗೂ ತಾಜಿಯಾಗಳನ್ನು ನಿರ್ಭಂದಿಸಲಾಗಿದೆ ಆದ್ದರಿಂದ ಕೋವಿಡ್ ನಿಯಮ ಪಾಲನೆಯ ಜೊತೆಗೆ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದರು. 

ಸಿಪಿಐ ಬಸವರಾಜ ಹಳಬಣ್ಣವರ ಮಾತನಾಡಿ ಕೋರೋನಾ ಮೂರನೇ ಅಲೆಯ ಹೊಸ್ತಿಲಲ್ಲಿ ಇರುವ ನಾವು ಅದನ್ನು ಅಲ್ಲಿಯೇ ತಡೆಯಬೇಕಿದೆ ಆದ್ದರಿಂದ ಮುಂಜಾಗೃತೆ ವಹಿಸುವುದು ಅವಶ್ಯವಾಗಿದ್ದು ಆದೇಶ ಪಾಲನೆ ಮಾಡಿ ಸರಳವಾಗಿ ಹಬ್ಬ ಆಚರಿಸಿ ಎಂದರು. 

ಪಿಎಸ್‌ಐ ಕೆ ಎನ್ ಹಳ್ಳಿಯವರ, ಅಂಜುಮನ್ ಅದ್ಯಕ್ಷ ಸುಲೇಮಾನ್ ಖಾಜೇಖಾನ್‌ನವರ, ಶ್ರೀಕಾಂತ ಬುಳ್ಳಕ್ಕನವರ, ಮಜೀದ್ ಮಾಳಗೀಮನಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ